
ಪ್ರೇಯಸಿ ಸಬಾ ಆಜಾದ್ ರಿಗಾಗಿ ಹೃತಿಕ್ ರೋಷನ್ ಪೋಸ್ಟ್ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ರೊಮ್ಯಾಂಟಿಕ್ ಪೋಸ್ಟ್ ನ್ನು ಹಂಚಿಕೊಳ್ಳುವಾಗ ಹೃತಿಕ್ ಸಬಾಗಾಗಿ ಸಾಕಷ್ಟು ಬರೆದಿದ್ದಾರೆ.
ಬುಧವಾರ ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಲೇಡಿ ಲವ್ ಸಬಾ ಅವರ ೩೮ ನೇ ಹುಟ್ಟುಹಬ್ಬ ಆಗಿತ್ತು. ಹೌದು, ಬುಧವಾರ ಸಾಬಾ ಆಜಾದ್ ಅವರ ವಿಶೇಷ ದಿನವನ್ನು ಆಕೆಯ ಬಾಯ್ ಫ್ರೆಂಡ್ ಇನ್ನಷ್ಟು ಸ್ಪೆಷಲ್ ಮಾಡಿದ್ದಾರೆ.
ಈಗ ಹೃತಿಕ್ ಸಾಮಾಜಿಕ ಮಾಧ್ಯಮದಲ್ಲಿ ರೊಮ್ಯಾಂಟಿಕ್ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋವನ್ನು ಹಂಚಿಕೊಳ್ಳುವಾಗ, ಸಬಾ ಅವರಿಂದ ಜೀವನದಲ್ಲಿ ದೊಡ್ಡ ಪಾಠವನ್ನು ಕಲಿತೆನೆಂದು ನಟ ಬಹಿರಂಗಪಡಿಸಿದ್ದಾರೆ.
ಹೃತಿಕ್ ರೋಷನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಫೋಟೋದಲ್ಲಿ, ಈ ಜೋಡಿ ಒಟ್ಟಿಗೆ ತುಂಬಾ ಸುಂದರವಾಗಿ ಕಾಣುತ್ತಾರೆ. ಈ ಪ್ರೇಮ ಪಕ್ಷಿಗಳು ಸಾಂದರ್ಭಿಕ ನೋಟದಲ್ಲಿ ಜೋಡಿಯಾಗಿ ಕಂಡುಬರುತ್ತಾರೆ. ಹೃತಿಕ್ ಬೂದು ಬಣ್ಣದ ಜಾಕೆಟ್‌ನೊಂದಿಗೆ ಕಪ್ಪು ನೋಟವನ್ನು ಪೂರ್ಣಗೊಳಿಸಿದರೆ ಅತ್ತ ಅವರ ಗೆಳತಿ ಸಬಾ ಬಿಳಿ ಮತ್ತು ಕಪ್ಪು ಪಟ್ಟೆಯುಳ್ಳ ಟಾಪ್‌ನೊಂದಿಗೆ ಬೂದು ಬಣ್ಣದ ಜಾಗರ್‌ಗಳನ್ನು ಧರಿಸಿದ್ದಾರೆ. ಇಬ್ಬರೂ ಮೆಟ್ಟಿಲುಗಳ ಮೇಲೆ ಕುಳಿತು ಕ್ಯಾಮರಾಗೆ ನಗುತ್ತಾ ಪೋಸ್ ನೀಡುತ್ತಿದ್ದು ಸಬಾ ಕೂಡ ಪ್ರೀತಿಯಿಂದ ಹೃತಿಕ್ ರ ಕೈ ಹಿಡಿದಿದ್ದಾರೆ.
ಈ ನಡುವೆ ಹೃತಿಕ್ ರೋಷನ್ ತಮ್ಮ ರೊಮ್ಯಾಂಟಿಕ್ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ,
”ನಾವೆಲ್ಲರೂ ಆ ಸ್ಥಳವನ್ನು ಹುಡುಕುತ್ತಿದ್ದೇವೆ, ಪಾಲುದಾರಿಕೆಯಲ್ಲಿ ಸ್ಫೂರ್ತಿ ಮತ್ತು ಭದ್ರತೆಯನ್ನು ಅನುಭವಿಸುವ ಸ್ಥಳವೊಂದನ್ನು…..”
“ಬನ್ನಿ ಜೀವನದಲ್ಲಿ ನಿಮಗೆ ಸಿಕ್ಕಿದ್ದನ್ನು ನೀಡಿ, ಎಡ್ವೆಂಚರ್ ನ್ನು ಪ್ರಾರಂಭಿಸಿ . ಅದು ನಿಮಗೆ ಹೇಗೆ ಅನಿಸುತ್ತಿದೆ….. ಮನೆ ತರಹ…. ಇಲ್ಲಿಯೇ ಸಾಹಸವು ಪ್ರಾರಂಭವಾಗುತ್ತದೆ … ಲೌಕಿಕದಲ್ಲಿಯೂ ಮ್ಯಾಜಿಕ್ ನ್ನು ಸೃಷ್ಟಿಸುತ್ತದೆ. ಮತ್ತು ನಾನು ಇದನ್ನೆಲ್ಲ ನಿಮ್ಮಿಂದ ಕಲಿಯುತ್ತಿದ್ದೇನೆ.” ನಟ ಮತ್ತಷ್ಟು ಬರೆದುಕೊಂಡಿದ್ದಾರೆ – ”ಜನ್ಮದಿನದ ಶುಭಾಶಯಗಳು, ನನ್ನ ಪ್ರೀತಿ.” ಈಗ ಹೃತಿಕ್ ರೋಷನ್ ತಮ್ಮ ಲೇಡಿ ಲವ್ ಗಾಗಿ ಮಾಡಿದ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಒಂದೆಡೆ ಅಭಿಮಾನಿಗಳು ಸಬಾ ಆಜಾದ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರುತ್ತಿದ್ದಾರೆ.ಹೃತಿಕ್ ರೋಷನ್ ಅವರ ರೊಮ್ಯಾಂಟಿಕ್ ಶೈಲಿಯನ್ನು ನೋಡಿದ ನಂತರ ಜನರು ಈಗ ಅವರ ಮೇಲೆಯೂ ಪ್ರೀತಿಯನ್ನು ಸುರಿಸುತ್ತಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ಅಂಕಿತಾ ಲೋಖಂಡೆ
ಬಿಗ್ ಬಾಸ್ ೧೭ ರ ಹೊಸ ಸಂಚಿಕೆಯಲ್ಲಿ, ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ವಿಘಟನೆಯ ಬಗ್ಗೆ ಮೌನ ಮುರಿದರು.
ಬಿಗ್ ಬಾಸ್ ೧೭ ಸದ್ಯಕ್ಕೆ ಅಭಿಮಾನಿಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಕಾರಣ ಕಾರ್ಯಕ್ರಮದ ಆಸಕ್ತಿದಾಯಕ ಪರಿಕಲ್ಪನೆ ಮತ್ತು ಅದರಲ್ಲಿನ ಅನೇಕ ಸ್ಪರ್ಧಿಗಳು.
ಪತಿ ವಿಕ್ಕಿ ಜೈನ್ ಅವರೊಂದಿಗೆ ಕಾರ್ಯಕ್ರಮಕ್ಕೆ ಬಂದಿರುವ ಈ ಸ್ಪರ್ಧಿಗಳ ಪಟ್ಟಿಯಲ್ಲಿ ಅಂಕಿತಾ ಲೋಖಂಡೆ ಹೆಸರು ಸೇರಿದೆ. ಪ್ರತಿದಿನ ಅವರಿಗೆ ಸಂಬಂಧಿಸಿದ ಕೆಲವು ಕಥೆಗಳು ಮುಖ್ಯಾಂಶಗಳನ್ನು ಉಂಟು ಮಾಡುತ್ತವೆ.

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಂಡೆ ಅವರ ಸಂಬಂಧ ಮತ್ತು ವಿಘಟನೆಯ ಬಗ್ಗೆ ನಟಿ ಇತ್ತೀಚೆಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಮುನವ್ವರ್ ಫಾರೂಕಿ ಅವರಿಗೆ ಸತ್ಯವನ್ನು ಹೇಳಿದರು:
ಮುನವ್ವರ್ ಫಾರುಕಿ ಅವರೊಂದಿಗಿನ ಚರ್ಚೆಯಲ್ಲಿ ನಟಿ ಅನೇಕ ಸಂಗತಿಗಳನ್ನು ಬಹಿರಂಗಪಡಿಸಿದರು. ಈ ಬಗ್ಗೆ ನಟಿ ಬಹಿರಂಗವಾಗಿ ಮೌನ ಮುರಿದಿರುವುದು ಇದೇ ಮೊದಲು. “ತಮ್ಮ ಪ್ರೀತಿ ಪವಿತ್ರಾ ರಿಶ್ತಾ ಸೆಟ್‌ನಿಂದ ಪ್ರಾರಂಭವಾಯಿತು ಮತ್ತು ಏಳು ವರ್ಷಗಳ ಕಾಲ ನಡೆಯಿತು” ಎಂದು ಅಂಕಿತಾ ಸಂಭಾಷಣೆಯ ಸಮಯದಲ್ಲಿ ಹೇಳಿದರು. ಆದರೆ ಸುಶಾಂತ್ ಕಣ್ಣುಗಳಲ್ಲಿ ನನಗೆ ನೀಡಬೇಕಾದ ಪ್ರೀತಿಯು ಕ್ರಮೇಣ ಕಾಣದಂತಾಯ್ತು ಎಂದೂ ಬೇಸರದಿಂದ ಅಂಕಿತಾ ಹೇಳಿದರು.

ಸಂಬಂಧವನ್ನು ಕೊನೆಗೊಳಿಸುವ ನಿರ್ಧಾರ ಸುಶಾಂತ್ ರದ್ದೇ ಆಗಿತ್ತು. ಅವರು ಒಂದೇ ರಾತ್ರಿಯಲ್ಲಿ ನನ್ನಿಂದ ಕಣ್ಮರೆಯಾದರು. ಅವರು ಯಶಸ್ಸನ್ನು ಪಡೆಯುತ್ತಿರುವಾಗ, ಜನರು ಅವರತ್ತ ಗಮನ ಹರಿಸಿದ್ದರು. ಅವರು ನನ್ನಲ್ಲಿ ಸಂಪರ್ಕದಲ್ಲಿರಬಹುದಿತ್ತು.ಆದರೆ ಸುಶಾಂತ್ ಬ್ರೇಕಪ್ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಇಷ್ಟೇ ಅಲ್ಲ, ಸುಶಾಂತ್ ತನ್ನೊಂದಿಗೆ ಏನಾಗುತ್ತಿದೆ ಎಂದೂ ಹೇಳಬಹುದಿತ್ತು, ಆದರೆ ಸುಶಾಂತ್ ಅವರು ಹಾಗೂ ಮಾಡಲಿಲ್ಲ ಎಂದು ಅಂಕಿತಾ ನೊಂದು ಹೇಳಿದ್ದಾರೆ.