ಹೂ ನೀಡಿ ಸ್ವಾಗತ

ಧಾರವಾಡ,ಮ ಮೇ.28 : ಕಲಘಟಗಿ ತಾಲೂಕಿನ ದುಮ್ಮವಾಡ ಹೋಬಳಿಯ ಹಿರೇಹೊನ್ನಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಾತೋಶ್ರೀ ರಮಾಬಾಯಿ ಅಂಬೇಡ್ಕರ ವಿದ್ಯಾರ್ಥಿನಿಲಯದಲ್ಲಿ ಸ್ಥಾಪಿಸಿರುವ ಕೋವಿಡ್ ಕಾಳಜಿ ಕೇಂದ್ರದಿಂದ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಹೊರಬಂದ ಜಾರ್ಖಂಡ ರಾಜ್ಯದ ಹಾಗೂ ಹಿರೇಹೊನ್ನಳ್ಳಿಯ ಕೂಲಿ ಕಾರ್ಮಿಕರಾಗಿರು 8 ವ್ಯಕ್ತಿಗಳಿಗೆ ಗ್ರಾಮ ಪಂಚಾಯತ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕೆಂಪು ಗುಲಾಬಿ ಹೂ ನೀಡಿ, ಚಪ್ಪಾಳೆ ತಟ್ಟಿ, ಹರ್ಷದಿಂದ ಸ್ವಾಗತಿಸಿದರು. ಗುಣಮುಖರಾದವರು ಸಿಬ್ಬಂದಿಗಳಿಗೆ ಕೃತಜ್ಞತೆಯಿಂದ ಕೈ ಮುಗಿದು ಮನೆಗೆ ತೆರಳಿದರು.
ಹಿರೇಹೊನ್ನಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ ಕೋವಿಡ್ ಕಾಳಜಿ ಕೇಂದ್ರದ ಉಸ್ತುವಾರಿಯನ್ನು ಕಲಘಟಗಿ ತಹಶೀಲ್ದಾರ ಅಶೋಕ ಶಿಗ್ಗಾಂವಿ, ಪೆÇ್ರೀಬೆಷನರಿ ತಹಶೀಲ್ದಾರ ಕೆ.ಆರ್.ಪಾಟೀಲ, ತಾಲೂಕಾ ಪಂಚಾಯತ ಇ.ಓ. ಎಸ್.ಎಂ.ಮೇಟಿ, ಕಂದಾಯ ನಿರೀಕ್ಷಕ ನಾಶಿರ ಅಮರಗೋಳ, ಪಿ.ಡಿ.ಓ. ಉಮೇಶ ಚಿಕ್ಕಣ್ಣವರ ಮತ್ತು ಗ್ರಾಮ ಲೆಕ್ಕಿಗ ಸಂತೋಷ ಲಮಾಣಿ ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ.
ಹಿರೇಹೊನ್ನಳ್ಳಿಯ ಕೋವಿಡ್ ಕಾಳಜಿ ಕೇಂದ್ರದಲ್ಲಿ 100 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದ್ದು, 17 ಜನ ಸೋಂಕಿತರು ಆರೈಕೆ ಪಡೆಯುತ್ತಿದ್ದಾರೆ. ಕಾಳಜಿ ಕೇಂದ್ರಕ್ಕೆ ಆಗಮಿಸುವ ಸೋಂಕಿತರಿಗೆ ಮನೆಯವರಂತೆ ಸ್ವಾಗತಿಸಿ, ಪ್ರೀತಿಯಿಂದ ಕಾಣುವ ಮತ್ತು ಗುಣಮುಖರಾದ ಸೋಂಕಿತರನ್ನು ಖುಷಿಯಿಂದ ಹೊಗುವಂತೆ ನೋಡಿಕೊಂಡರು.