ಹೂ ಗಿಡಗಳ ಮಧ್ಯೆ ಗಾಂಜಾ ಬೆಳೆ: ಓರ್ವ ಬಂಧನ

ಪಿರಿಯಾಪಟ್ಟಣ, ನ.03: ತಾಲ್ಲೂಕಿನ ತಿಮಕಾಪುರ ಗ್ರಾಮದ ಚಂದ್ರೇಗೌಡ ಎಂಬಾತ ತನ್ನ ಜಮೀನಿನಲ್ಲಿ ಹೂ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿರಿಯಾಪಟ್ಟಣ ಪೆÇಲೀಸರು ಆತನನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಡಿವೈಎಸ್ಪಿ ಸುಂದರ್ ರಾಜ್ ಮತ್ತು ವೃತ್ತ ನಿರೀಕ್ಷಕ ಪ್ರದೀಪ್ ರವರ ಮಾರ್ಗದರ್ಶನದಲ್ಲಿ ಎಸ್‍ಐ ಸದಾಶಿವ ತಿಪ್ಪಾ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ ಪೆÇಲೀಸರು ಚಂದ್ರೇಗೌಡ ತನ್ನ ವಾಸದ ಮನೆಯ ಹತ್ತಿರದ ಜಮೀನಿನಲ್ಲಿ ಹೂವಿನ ಗಿಡಗಳ ಮಧ್ಯೆ ಬೆಳೆದಿದ್ದ 440 ಗ್ರಾಂನ 4ಗಾಂಜಾ ಗಿಡ ಹಾಗೂ 265ಗ್ರಾಂನ ಅರ್ದಂಬರ್ಧ ಒಣಗಿರುವ ಗಾಂಜಾ ಸೊಪ್ಪನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಸಿಬ್ಬಂದಿ ಜಯರಾಮೇಗೌಡ, ಪ್ರಕಾಶ್, ಸಯ್ಯದ್ ಕಬೀರುದ್ದೀನ್, ಸತೀಶ್, ರವಿ, ಮಹಾದೇವ, ಯೋಗ, ಅಭಿಜಿತ್, ಚಾಲಕ ಹಬೀಬ್ ಪಾಲ್ಗೊಂಡಿದ್ದರು.