ಹೂವಿನಹಡಗಲಿ : ಮೂರು ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.26 : ತಾಲೂಕಿನ ಮಹಾಜನದಹಳ್ಳಿ, ಹೊಳಗುಂದಿ, ಹ್ಯಾರಡ ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
ಈ ಹಿಂದೆ ಘೋಷಿಸಿದ್ದ ಸರ್ಕಾರ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪಂಚಾಯಿತಿಗಳ ಪ್ರತಿನಿಧಿಗಳು ಪ್ರಶಸ್ತಿ ಸ್ವೀಕರಿಸಿದರು. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಸಿಬ್ಬಂದಿ ಇದ್ದರು.
ಇದೇ ವೇಳೆ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೂವಿನಹಡಗಲಿ ತಾಲೂಕು ಪಂಚಾಯಿತಿಗೆ ‘ಶಿಕ್ಷಣ ಸ್ನೇಹಿ’ ಪುರಸ್ಕಾರ ಲಭಿಸಿತು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಪ್ರಕಾಶ್, ನರೇಗಾ ಸಹಾಯಕ ನಿರ್ದೇಶಕ ಯು.ಹೆಚ್.ಸೋಮಶೇಖರ ಪ್ರಶಸ್ತಿ ಸ್ವೀಕರಿಸಿದರು.