ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.12: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು ಈಚೆಗೆ ಪುನರ್ ರಚಿಸಲಾಗಿದ್ದು, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸತ್ಯನಾರಾಯಣ ಅವರು ನೂತನ ಪದಾಧಿಕಾರಿಗಳನ್ನು ಘೋಷಿಸಿದರು.
ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಎಂ. ನಿಂಗಪ್ಪ, ಉಪಾಧ್ಯಕ್ಷರಾಗಿ ನಾಗರಿಕ ಪತ್ರಿಕೆಯ ಎಲ್.ಅಕ್ಬರ್, ಪ್ರಧಾನ ಕಾರ್ಯದರ್ಶಿಯಾಗಿ ಉದಯವಾಣಿಯ ಹೆಚ್.ವಿಶ್ವನಾಥ, ಖಜಾಂಚಿಯಾಗಿ ಉದಯಕಾಲ ಪತ್ರಿಕೆಯ ಕೆ.ಅಯ್ಯನಗೌಡ, ಸಹ ಕಾರ್ಯದರ್ಶಿಯಾಗಿ ಸಂಜೆವಾಣಿ ಪತ್ರಿಕೆಯ ಎಸ್.ಎಂ.ಜಾನ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ಖಜಾಂಚಿ ಅನೂಪ್‍ಕುಮಾರ್, ಸಹ ಕಾರ್ಯದರ್ಶಿ ಸುರೇಶ್ ಚವ್ಹಾಣ್, ರಾಜ್ಯ ಸಮಿತಿ ಸದಸ್ಯ ವೆಂಕೋಬಿ, ತಾಲೂಕು ಘಟಕದ ಸದಸ್ಯರಾದ ಎಸ್.ನಿಂಗರಾಜ, ಕೆ.ಸೋಮಶೇಖರ್, ಪಿ.ವೀರಣ್ಣ, ಎಸ್.ಎಂ.ಬಸವರಾಜ, ಎಂ.ಅಶೋಕ, ಹೆಚ್.ಚಂದ್ರಪ್ಪ, ಚಂದ್ರು ಕೊಂಚಿಗೇರಿ, ಎಂ.ಪಿ.ಎಂ.ಶಿವಪ್ರಕಾಶ, ಕೆ.ಮಧುಸೂದನ ಇದ್ದರು.