ಹೂವಿನಹಡಗಲಿ ಕ್ಷೇತ್ರ ದರ್ಶನ


ಎನ್.ವೀರಭದ್ರಗೌಡ
ಬಳ್ಳಾರಿ:ಮೇ,1- ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಎಂದಾಕ್ಷಣ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ನೆನಪಿಗೆ ಬರುವುದು ರಾಜ್ಯದ  ದಿವಂಗತ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಹೆಸರು.
ಹಡಗಲಿ ಎಂದರೆ ಪ್ರಕಾಶ್, ಪ್ರಕಾಶ್  ಎಂದರೆ ಹಡಗಲಿ ಎನ್ನುವಂತಿತ್ತು. ಅವರ ತಂದೆ ಶಾಸಕರಾಗಿ ಸಮಾಜಸೇವೆ ಮಾಡಿದ್ದರು. ಪ್ರಕಾಶ್ ಅವರು ಐದು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಹೆಚ್.ಪಟೇಲ್, ದೇವೆಗೌಡರು, ಕುಮಾರಸ್ವಾಮಿ ಅವರ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು.
ಇಂತಹ ಮಹಾನ್ ವ್ಯಕ್ತಿಯನ್ನು ಹೊಂದಿದ್ದ ಹಡಗಲಿ ಕ್ಷೇತ್ರದ ಕುರಿತು ಒಂದು ವರದಿ. 
ಈ ಮೊದಲು ಸಾಮಾನ್ಯ ಕ್ಷೇತ್ರವಾಗಿದ್ದ ಹಡಗಲಿ ಕ್ಷೇತ್ರ 2008 ರಿಂದ ಪರಿಶಿಷ್ಟ ಜನಾಂಗಕ್ಕೆ  ಮೀಸಲಿದೆ. ಈ ಮೊದಲಿದ್ದ ಹರಪನಹಳ್ಳಿ ತಾಲೂಕಿನ ಚಿಗಟೇರಿ ಪಿರ್ಕವನ್ನು ಬಿಟ್ಟು, ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಿಗೇರಿ ಹೋಬಳಿಯ ಹಳ್ಳಿಗಳು ಸೇರಿಕೊಂಡಿವೆ.
ಹೆಚ್ಚಿನದಾಗಿ ಮಳೆಯಾಧಾರಿತ ಪ್ರದೇಶವನ್ನು ಹೊಂದಿದ್ದರೂ. ತುಂಗಭದ್ರ ನದಿ ದಂಡೆಯನ್ನು ಹೊಂದಿದ್ದು ನಿರಾವರಿ ಪಂಪ್ ಸೆಟ್‍ಗಳಿಂದ ಕೆಲ ಪ್ರದೇಶ ನೀರಾವರಿಯಾಗಿತ್ತು. ಎಂ.ಪ್ರಕಾಶ್ ಅವರ ಸಥ ಪ್ರಯತ್ನ ದಿಂದ ಈಗ ಕ್ಷೇತ್ರದ 40 ಸಾವಿರ ಎಕರೆ ಸಿಂಗಟಾಲೂರು ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸಿ ಕೃಷಿಗೆ ಬಳಕೆಯಾಗುತ್ತಿದೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರೆತಿದೆ.
ಧಾರ್ಮಿಕವಾಗಿ ವಾರ್ಷಿಕವಾಗಿ ನಡೆಯುವ ಪ್ರಸಿದ್ದ ಮೈಲಾರಲಿಂಗೇಶ್ವರನ ಕಾರಣಿ ಮತ್ತು  ಬೃಹತ್ ನಂದಿ ವಿಗ್ರಹ ಹಾಗು ಸುಕ್ಷ್ಮ ಶಿಲ್ಪ ಕೆತ್ತನೆಯ ಕುರವತ್ತಿ ಬಸವೇಶ್ವರ   ದೇವಸ್ಥಾನ. ಜೊತೆಗೆ ಸದಾ ಹಚ್ಚ ಹಸಿರಿನ ಪರಿಸರದ ಸೋಗಿ ಬೆಟ್ಟ ಪ್ರದೇಸ ಅಲ್ಲಿನ ಮಲ್ಲಯನ್ನ ದೇವಸ್ಥಾನ. ಇಲ್ಲಿ  ಪವನ ವಿದ್ಯುತ್ ಉತ್ಪಾದನೆಯ ಕೇಂದ್ರವೂ ಇದೆ.
ರಾಣಿ ಅಬ್ಬಕ್ಕ ದೇವಿ ಆಳಿದ ನಾಡಿದು. ಈ ಹಿಂದೆ ಹಂಪಿ ವಿರೂಪಾಕ್ಷನ ಪೂಜೆಗೆ ತುಂಗಭದ್ರ ನದಿಯಲ್ಲಿ ಇಲ್ಲಿ ಬೆಳೆಯುತ್ತಿದ್ದ ಮಲ್ಲಿಗೆ ಹೂವನ್ನು ಕಳಿಸುತ್ತಿದ್ದರಿಂದ ಹೂವಿನ ಹಡಗಲಿ ಎಂದು ಹೆಸರು ಪಡೆದಿದೆ ಎಂಬ ಪ್ರತೀತಿ ಇದೆ.
ಈಗಲೂ ವಿವಿಧ ತಳಿಯ ಮಲ್ಲಿಗೆ ಹೂವಿನ ಬೆಳೆ ಬೆಳೆಯಲಾಗುತ್ತಿದೆ. ಜೊತೆಗೆ ಶೆಂಗಾ, ಜೋಳ,ಸೂರ್ಯಕಾಂತಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಕ್ಷೇತ್ರದಲ್ಲಿ ಸರಕಾರದಿಂದ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಾಗಿದ್ದರೂ ತಾಂಡಾದ ಜನತೆ ಕೂಲಿಗಾಗಿ ಕಾಫಿ ಸೀಮೆಗೆ ವಲಸೆ ಹೋಗುತ್ತಾರೆ. ಸರಕಾರಿ ಇಂಜಿನೀಯರಿಂಗ್ ಕಾಲೇಜು ಇದೆ.
ಬಿಜೆಪಿ ಒಮ್ಮೆ ಮಾತ್ರ ಗೆದ್ದಿದೆ.
ಕಣದಲ್ಲಿ:
ಹಾಲಿ ಶಾಸಕರಾಗಿ ಕಾಂಗ್ರೆಸ್ ನ ಪಿ.ಟಿ.ಪರಮೇಶ್ವರ ನಾಯ್ಕ ಇದ್ದಾರೆ‌ ಅವರು ಈ ಕ್ಷೇತ್ರದಿಂದ ಮೂರನೇ ಬಾರಿಗೆ ಅಯ್ಕೆ ಬಯಸಿ ಕಣದಲ್ಲಿದ್ದಾರೆ.
ಬಿಜೆಪಿಯಿಂದ ಹೊಸ ಮುಖ ಕೃಷ್ಣ ನಾಯ್ಕ ಕಣದಲ್ಲಿದ್ದು. ಜೆಡಿಎಸ್ ನಿಂದ ಪುತ್ರೇಸ್ ಸೇರಿದಂತರ ಎಂಟು ಜನರು ಸ್ಪರ್ಧಾ ಕಣದಲ್ಲಿದ್ದಾರೆ.
ಮತದಾರರು:
ಕ್ಷೇತ್ರದಲ್ಲಿ 191270 ಮತದಾರರಿದ್ದು 96632 ಪುರುಷ ಮತ್ತು 94624 ಮಹಿಳಾ ಮತದಾರರು ಹಾಗು 14 ಇತರೇ ಮತದಾರರು  ಮತದಾನದ ಹಕ್ಕು ಪಡೆದಿದ್ದಾರೆ.
 ಮತದಾನಕ್ಕೆ  218 ಮತಗಟ್ಟೆಗಳ ವ್ಯವಸ್ಥೆ ಮಾಡಿದೆ.