
ಸಂಜೆವಾಣಿ ವಾರ್ತೆ
ಹೂವಿನಹಡಗಲಿ :ಏ,6- ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಅಂಗವಿಕಲರು ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಿದರು.
ತಾಲೂಕು ಸ್ವೀಪ್ ಸಮಿತಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಶಾಸ್ತ್ರಿ ವೃತ್ತದಲ್ಲಿ ನಾವಣಾಧಿಕಾರಿ ಶರಣಪ್ಪ ಮುದಗಲ್ ಮತ್ತು ಜಿ.ಪಂ. ಯೋಜನಾ ನಿರ್ದೇಶಕ ಅಶೋಕ ತೋಟದ ಜಾಥಾಕ್ಕೆ ಚಾಲನೆ ನೀಡಿದರು.
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ ಜಾಥಾ ಎಂಪಿಪಿ ನಗರ, ಕಾಯಕನಗರವರೆಗೂ ತೆರಳಿ ಮೂಲ ಸ್ಥಳದಲ್ಲಿ ಕೊನೆಗೊಂಡಿತು. ಕಡ್ಡಾಯ ಮತದಾನ ಕುರಿತು ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಲಾಯಿತು.
ತಹಶೀಲ್ದಾರ್ ಕೆ.ಶರಣಮ್ಮ, ತಾ.ಪಂ. ಇಒ ಎಸ್.ಎಸ್.ಪ್ರಕಾಶ್, ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ನರೇಗಾ ತಾಂತ್ರಿಕ ಸಂಯೋಜಕ ಪ್ರಕಾಶನಾಯ್ಕ, ಅಂಗವಿಕಲರ ಸಂಘದ ಅಧ್ಯಕ್ಷ ಎಸ್.ಚಂದ್ರಪ್ಪ ತಳಕಲ್, ಪುರಸಭೆಯ ಮೈಲಾರಪ್ಪ, ರಾಮಮೂರ್ತಿ, ಗಂಗಯ್ಯ, ಎಂ.ಆರ್.ಡಬ್ಲೂ. ಮಂಜುನಾಥ ಹಾಗೂ ವಿವಿಧ ಗ್ರಾ.ಪಂ. ಪಿಡಿಒಗಳು ಭಾಗವಹಿಸಿದ್ದರು.