ಹೂವಿನಹಡಗಲಿಯಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ,ಎ,12- ಪಟ್ಟಣದಲ್ಲಿ ಮುಸ್ಲಿಂ ಸಮಾಜ ಬಾಂಧವರು ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ತಿಂಗಳ ಕಾಲ ಉಪವಾಸ ವ್ರತದಲ್ಲಿದ್ದ ಮುಸ್ಲಿಂ ಬಾಂಧವರು ಬುಧವಾರ ಸಂಜೆ ಉಪವಾಸವನ್ನು ಅಂತ್ಯಗೊಳಿಸಿ, ಚಂದ್ರದರ್ಶನದೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಪಟ್ಟಣದ ಜಮೀಯಾ ಮಸೀದಿ ಬಳಿ ಗುರುವಾರ ಬೆಳಿಗ್ಗೆ ಜಮಾಯಿಸಿದ ಸಮಾಜ ಬಾಂಧವರು, ಅಲ್ಲಿಂದ ಅಲ್ಲಾಹುವಿನ ಸ್ಮರಣೆ ಮಾಡುತ್ತಾ ಬೃಹತ್ ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳಿದರು.
ಈದ್ಗಾ ಮೈದಾನದಲ್ಲಿ ಮೌಲಾನಾ ಅಜರುದ್ದೀನ್ ಖಾಜಿ ಮತ್ತು ಹಜರತ್ ಖಾಜಿ ಮಕ್ಬುಲ್ ಸಾಬ್ ಅವರು ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಬಳಿಕ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಮಾಜ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಶಾಸಕ ಕೃಷ್ಣನಾಯ್ಕ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.
ಮುಖಂಡರಾದ ವಾರದ ಗೌಸ್ ಮೊಹಿದ್ದೀನ್, ಸಿ.ಚಾಂದಸಾಹೇಬ್, ಕೆ.ಗೌಸ್ ಮೊದೀನ್, ಸಿರಾಜ್ ಬಾವಿಹಳ್ಳಿ, ಕಪಾಲಿ ಮೊಸಿನ್, ಈದ್ಗಾ ಕಮಿಟಿ ಅಧ್ಯಕ್ಷ ಕೆ. ಬಡೇಸಾಬ್, ಎಚ್.ಶೇಕ್ ಮಹ್ಮದ್, ಟೈಲರ್ ಗೌಸ್ ಮೊದೀನ್ ಹಾಗೂ ಅಂಜುಮನ್ ಕಮಿಟಿಯ ಪದಾಧಿಕಾರಿಗಳು, ಎಲ್ಲ ಮಸೀದಿಗಳ ಮುತುವಲ್ಲಿಗಳು, ದಲಾಯತ್ ದೈವದ ಸದಸ್ಯರು ಭಾಗವಹಿಸಿದ್ದರು.