ಹೂವಿನಹಡಗಲಿಯಲ್ಲಿ ಬಸವ ಜಯಂತಿ ಸಂಭ್ರಮಾಚರಣೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ,24- : ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ತಹಶೀಲ್ದಾರ್ ಕೆ.ಶರಣಮ್ಮ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್ ಎನ್.ಹಳ್ಳಿಗುಡಿ, ಉಪನ್ಯಾಸಕ ಶಂಕರ ಬೆಟಗೆರೆ, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಹಕ್ಕಂಡಿ ಶಿವನಾಗಪ್ಪ ಇತರರು ಇದ್ದರು.
ಸಬ್ ಜೈಲ್‍ನಲ್ಲಿ ಬಸವ ಜಯಂತಿ : ಪಟ್ಟಣದ ಸಬ್ ಜೈಲ್‍ನಲ್ಲಿ ಬಸವ ಜಯಂತಿ ಆಚರಿಸಲಾಯಿತು. ಗೃಹ ರಕ್ಷಕದಳ ಕಮಾಂಡೆಂಟ್  ಕೆ. ರಾಜಪೀರ ಮಾತನಾಡಿ, ಬಸವಣ್ಣನವರ ತತ್ವ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರಾಗೃಹ ಅಧೀಕ್ಷಕ ಶರಣಬಸವ ಮಾತನಾಡಿ, ಸಮಸಮಾಜದ ಕನಸು ಕಂಡಿದ್ದ ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ದಾರ್ಶನಿಕರ ಚಿಂತನೆಗಳನ್ನು ಪಾಲಿಸುವುದರೊಂದಿಗೆ ಜೀವನದಲ್ಲಿ ನೆಮ್ಮದಿ ಕಾಣಬಹುದು ಎಂದು ತಿಳಿಸಿದರು. ಕಾರಾಗೃಹ ಮತ್ತು ಗೃಹರಕ್ಷಕ ದಳ ಸಿಬ್ಬಂದಿ ಇದ್ದರು.