ಹೂವಿನಹಡಗಲಿಯಲ್ಲಿ ಜಗಜೀವನ್ ರಾಂ ಜಯಂತಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ ಏ,6-ತಾಲೂಕು ಆಡಳಿತ ವತಿಯಿಂದ ಇಲ್ಲಿನ ತಾ.ಪಂ. ರಾಜೀವ್ ಗಾಂಧಿ ಸಭಾಂಗಣದಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ ಜಯಂತಿ ಆಚರಿಸಲಾಯಿತು.
ತಹಶೀಲ್ದಾರ್ ಕೆ.ಶರಣಮ್ಮ ಅವರು ಬಾಬೂಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಅಭಿವೃದ್ಧಿ ಹೊಂದಿ ಮುಖ್ಯ ವಾಹಿನಿಗೆ ಬರಬೇಕು ಎಂಬುದು ಬಾಬು ಜಗಜೀವನ್ ರಾಂ ಅವರ ಆಶಯವಾಗಿತ್ತು. ಇದಕ್ಕಾಗಿ ಹಲವು ವಿಧಾಯಕ ಕಾರ್ಯಕ್ರಮಗಳನ್ನು ರೂಪಿಸಿ ದೇಶದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರರು ಹೇಳಿದರು.
ತಾ.ಪಂ. ಇಒ ಎಸ್.ಎಸ್.ಪ್ರಕಾಶ್, ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ, ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ.ಅಶೋಕ, ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ನಿಂಗಪ್ಪ,ಕೆ.ಲಲಿತಮ್ಮ, ಬಾಬು ಜಗಜೀವನ್ ರಾಂ ವೇದಿಕೆ ಅಧ್ಯಕ್ಷ ಹೊಳಗುಂದಿ ಸ್ವಾಮಿ, ಮುಖಂಡರಾದ ಜಿ.ಬುಳ್ಳಪ್ಪ, ಜೆ.ಶಿವರಾಜ್, ಮೈಲಾರಪ್ಪ, ದುರುಗೇಶ, ದೊಡ್ಡ ನಿಂಗಪ್ಪ, ಯಮನೂರಪ್ಪ ಇದ್ದರು.