ಹೂವಿನತೋಟ ಗ್ರಾಮದ ಶ್ರೀವೀರಭದ್ರಶ್ವರ ಜಾತ್ರಾ ಮಹೋತ್ಸವ

ಚಿಂಚೋಳಿ,ಏ.5- ತಾಲೂಕಿನ ಮಿರಿಯಾಣ ಗ್ರಾಮದ ಹೂವಿನತೋಟ ದಲ್ಲಿ ಪ್ರತಿವರ್ಷದಂತೆ ಈ ವರ್ಷವು ವೀರಭದ್ರಶ್ವರರ 75ನೇ ಜಾತ್ರಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಜರಗಲಿದೆ ಎಂದು ಪ್ರಧಾನ ಅರ್ಚಕರು ಜಗದೀಶ್ ಸ್ವಾಮಿ ತಿಳಿಸಿದ್ದಾರೆ.
ನಾಳೆ ದಿನಾಂಕ 05-04-2023 ರಂದು ಬೆಳ್ಳಿಗೆ ಯಿಂದ ಸಾಯಂಕಾಲದ ವರೆಗೆ ದಾಸೋಗಿ ಕಾರ್ಯಕ್ರಮ, 06-04-2023 ರಂದು ಮುಂಜಾನೆ 08 ಗಂಟೆಗೆ ಪಲ್ಲಕಿ ಮೆರವಣಿಗೆ, ಅಗ್ಗಿ ಪ್ರವೇಶ ಹಾಗೂ ಸಾಯಂಕಾಲ 04 ಗಂಟೆಗೆ ವೀರಭದ್ರಶ್ವರರ ದಿವ್ಯ ರಥೋತ್ಸವ ಹಾಗೂ ಸಂಜೆ 06 ಗಂಟೆಗೆ ಕೈ ಕುಸ್ತಿ ನಡೆಯುತ್ತೆದೆ ಎಂದರು,
ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ, ಭಕ್ತರು ಇಲ್ಲಿನ ಜಾತ್ರಾ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕು ಎಂದು ದೇವಸ್ಥಾನದ ಟ್ರಸ್ಟ್ ಸದಸ್ಯರು ತಿಳಿಸಿದ್ದರು.