ಲಕ್ಷ್ಮೇಶ್ವರ,ಮಾ.27: ಕಳೆದ ಐದು ವರ್ಷಗಳ ಹಿಂದೆ ತಾಲೂಕಿನ ಗೋಜನೂರು ಹಳ್ಳಕ್ಕೆ ಹೆಬ್ಬಾಳದವರೆಗೆ 18 ಬಾಂದಾರಗಳನ್ನು ನಿರ್ಮಿಸಲಾಗಿದ್ದು ಈಗ ಆ ಬಾಂಧಾರಗಳಲ್ಲಿ ಹೂಳು ತುಂಬಿ ಅದರದ್ದಕ್ಕೂಆಪು ಬೆಳೆದಿದ್ದು ಮಳೆಗಾಲದಲ್ಲಿ ಹರಿಯುವ ನೀರು ಬಾಂದಾರಗಳ ಮುಖಾಂತರ ಹರಿಯದೆ ಎಲ್ಲೆಂದರಲ್ಲಿ ನುಗ್ಗಿ ಜಮಿನಗಳು ಹಾಳಾಗತೊಡಗಿದ್ದು ರೈತರ ಪಾಲಿಗೆ ಬಾಂದಾರಗಳು ವರವಾಗುವ ಬದಲು ಶಾಪವಾಗಿ ಪರಿಣಮಿಸಿವೆ.
ಕಳೆದ ಎರಡು ವರ್ಷಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿದು ಸರಾಗವಾಗಿ ಹೋಗಬೇಕಾಗಿದ್ದ ನೀರು ಜಮೀನುಗಳಲ್ಲಿ ನುಗ್ಗಿ ಜಮೀನುಗಳೆಲ್ಲಕೊನ್ನಾರಗಳಾಗಿ ಪರಿಣಮಿಸಿ ಇರುವ ಅಲ್ಪಸ್ವಲ್ಪ ಜಮೀನು ಕೊಚ್ಚಿಕೊಂಡು ಹೋಗುತ್ತಿವೆ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಕೋಟ್ಯಾಂತರ ರೂಪಾಯಿ ವೆಚ್ಚದ ಬಾಂದಾರಗಳು ನೀರು ತಡೆಹಿಡಿದು ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ನಿರ್ಮಿಸಿರುವ ಇವುಗಳ ಮೂಲ ಉದ್ದೇಶಕ್ಕೆ ಬೆಳೆದು ನಿಂತ ಆಪು ಮತ್ತು ಹೂಳು ಕಂಟಕವಾಗಿವೆ.
ಮಳೆಗಾಲ ಆರಂಭವಾಗುವ ಮುನ್ನ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಹೂ ಳು ಹೂಳು ತೆಗೆಯಲು ಮುಂದಾಗಬೇಕು ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಇಂತಹ ಯೋಜನೆಗಳಿಗೆ ಜಿಲ್ಲಾ ಪಂಚಾಯಿತಿಯಿಂದಲೇ ಅನುದಾನ ಒದಗಿಸಿ ಕಾರ್ಯಪ್ರವೃತ್ತರಾಗಿರುವುದು ಗಮನರ್ಹವಾಗಿದೆ.
ಈ ಕುರಿತಂತೆ ಗ್ರಾಮದ ರೈತರಾದ ಚನ್ನಪ್ಪ ಶಣ್ಮಖಿ ಮತ್ತು ಮಂಜುನಾಥ್ ಸಂದೇಶ ಗೌಡ ಈಶ್ವರಗೌಡ ದೊಡ್ಡ ಗೌಡ್ರೆ ದದ್ದು ಸಾಹೇಬ್ ದೊಡ್ಡಮನಿ ಮಲ್ಲನಗೌಡ ದೊಡ್ಡ ಗೌಡ್ರೆ ಮಳೆ ಸಂದಿ ಗೌಡ್ರ ಸೇರಿದಂತೆ ಅನೇಕ ರೈತರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರೇವಣಪ್ಪ ಮನಗೂಳಿ ಅವರನ್ನು ಹಳ್ಳದ ಪ್ರದೇಶದ ಜಮೀನುಗಳನ್ನು ಪರಿಶೀಲನೆಗೆ ಬಂದಾಗ ಅವುಗಳನ್ನು ಅವಲೋಕಿಸಿ ಇದು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅವರನ್ನೇ ಸಂಪರ್ಕಿಸಿ ಜಿಲ್ಲಾಧಿಕಾರಿ ಮುಖಾಂತರ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ.