ಹೂಳು ತುಂಬಿದ ನಾಲೆಯ ಸ್ವಚ್ಛಗೊಳಿಸಲು ಮುಂದಾದ ನಂದಿಗಾವಿ ಶ್ರೀನಿವಾಸ್ 

ಸಂಜೆವಾಣಿ ವಾರ್ತೆಹರಿಹರ ಆ ೨೮;  ತಾಲ್ಲೂಕಿನ ದೇವರಬೇಳಕೆರೆ ಪಿಕಪ್ ಯೋಜನೆಯ ಗಾಂಜಿ ವೀರಪ್ಪ ನಾಲೆಯ ಬಲದಂಡೆ ಕಾಲುವೆಯಲ್ಲಿ ಸಂಪೂರ್ಣ ಹೂಳು ತುಂಬಿದ್ದು  ಕೊನೆಭಾಗದ ಶಿವನಹಳ್ಳಿ ಬನ್ನಿಕೊಡು ಶಂಶಿಪುರ ಹಾಗೂ ಇನ್ನಿತರೆ ಗ್ರಾಮಗಳ ರೈತರ ಬೆಳೆಗೆ ನೀರಿನ ಅಭಾವ ಉಂಟಾಗಿದ್ದರಿಂದ ಸ್ಥಳಕ್ಕೆ ನೀರಾವರಿ ಎಂಜಿನಿಯರ್ ಹಾಗೂ ಗ್ರಾಮಸ್ಥರ ಜೊತೆಗೆ ತೆರಳಿ ಬಿ ಕಾಲುವೆಯ ಹೂಳನ್ನು ತಕ್ಷಣವೇ ತಮ್ಮ ವಯ್ಯಕ್ತಿಕ ಹಣ ಹಾಗೂ ರೈತರ ಸಹಕಾರದೊಂದಿಗೆ ತೆಗೆಸುವುದರ ಮೂಲಕಹರಿಹರ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕರು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ  ಕೊನೆಭಾಗದ ರೈತರ ಹರ್ಷಕ್ಕೆ ಕಾರಣವಾಗಿದ್ದಾರೆ.