ಹೂಳು ತುಂಬಿಕೊಂಡಿದ್ದ ಗಟಾರದ ಸ್ವಚ್ಛತೆಗೆ ಮುಂದಾದ ಪೌರ ಕಾರ್ಮಿಕರು


ಹರಿಹರ.ನ. 22;  ಸುಮಾರು ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ಗಟಾರದ ಸ್ವಚ್ಛತೆಗೆ ಮುಂದಾದ ನಗರಸಭೆ ಪೌರ ಕಾರ್ಮಿಕರು ನಗರದ ರಾಣಿ ಚನ್ನಮ್ಮ ವೃತ್ತದ ಸುತ್ತಮುತ್ತಲಿನ ಅಂಗಡಿ ಮುಗ್ಗಟ್ಟುಗಳ ಮುಂಭಾಗದಲ್ಲಿ ಸುಮಾರು ಹದಿನೈದು ವರ್ಷಗಳಿಂದ ಗಟಾರದಲ್ಲಿ ಹೂಳು ತುಂಬಿಕೊಂಡಿದ್ದ ತ್ಯಾಜ್ಯ ಮಣ್ಣು ಕಲ್ಲುಗಳು ಕಸಕಡ್ಡಿಗಳನ್ನು ಗಟಾರದಿಂದ ಹೊರ ತೆಗೆಯುವುದಕ್ಕೆ ಕಳೆದ 2ದಿನಗಳಿಂದ  ಗುರುಪ್ರಸಾದ್  ನೇತೃತ್ವದಲ್ಲಿ ಪೌರ ಕಾರ್ಮಿಕರ ತಂಡದೊಂದಿಗೆ ಸ್ವಚ್ಛತೆ ಕಾರ್ಯಕ್ಕೆ ಮುಂದಾದರು ಈ ವೇಳೆ ನಗರಸಭೆ  ಹಿರಿಯ ಆರೋಗ್ಯ ನಿರೀಕ್ಷಕ ಎಂ ಬಿ ಗುರುಪ್ರಸಾದ್ ಮಾತನಾಡಿ ಕಳೆದ ಒಂದು ವಾರದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಅಂಗಡಿ ಮುಗ್ಗಟ್ಟುಗಳಿಗೆ ಮಳೆ ನೀರು ನುಗ್ಗಿ ರಸ್ತೆಯ ಮೇಲೆಲ್ಲಾ ತ್ಯಾಜ್ಯ ಉಕ್ಕಿ ಹರಿದು  ಜನಜೀವನ ಅಸ್ತವ್ಯಸ್ತ ವಾಗಿತ್ತು ಮಳೆಯ ನೀರು ಅಂಗಡಿ ಮುಗ್ಗಟ್ಟುಗಳಿಗೆ ನಗುವುದಕ್ಕೆ ಕಾರಣ ಚರಂಡಿ ಗಟಾರಗಳಲ್ಲಿ ಹೂಳು ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಅಂಗಡಿ ಮನೆಗಳಿಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದನ್ನು ಮನಗಂಡು ಪೌರಾಯುಕ್ತಿ ಎಸ್ ಲಕ್ಷ್ಮಿ .ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಸ್ ಎಸ್ ಬಿರಾದರ್ ಸ್ಥಳ ಪರಿಶೀಲಿಸಿ ಗಟಾರಗಳನ್ನು ಸ್ವಚ್ಚತೆ ಮಾಡೋದಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ   ರಾಣಿ ಚನ್ನಮ್ಮ ವೃತ್ತದಲ್ಲಿ ನಿನ್ನೆಯಿಂದ ಗಟಾರ ಸ್ವಚ್ಚತೆಗೆ ಮುಂದಾಗಿದ್ದೇವೆ ಎಂದರು ಗಟಾರದಲ್ಲಿ ಸುಮಾರು 6ಅಡಿ ಮಣ್ಣು ಕಸ ಕಡ್ಡಿ ತ್ಯಾಜ್ಯ ತುಂಬಿಕೊಂಡಿದ್ದು ಜೆಸಿಬಿ ಯಂತ್ರ ಸಹಾಯ ಮತ್ತು ನಮ್ಮ ಪೌರ ಕಾರ್ಮಿಕರ ಸಿಬ್ಬಂದಿಯ ತಂಡದೊಂದಿಗೆ ಹೂಳು ತೆಗೆಯುತ್ತಿದ್ದೇವೆ ನಿನ್ನೆಯಷ್ಟೇ ಸುಮಾರು 5ಟ್ರ್ಯಾಕ್ಟರ್ ತ್ಯಾಜ್ಯ ಕಸವನ್ನು ಸಾಗಿಸಲಾಗಿದೆ ಇನ್ನೂ ಮುಂದುವರೆದು ಗಟಾರ ಹೂಳು ತೆಗೆಯುವ ಕಾರ್ಯವನ್ನು ಮಾಡಲಾಗುತ್ತದೆ ಮುಖ್ಯ ರಸ್ತೆಗಳಲ್ಲಿ ಚರಂಡಿ ಗಟಾರ ದ ಮೇಲೆ ಕಟ್ಟಡಗಳನ್ನು ಮಾಡಿಕೊಂಡಿದ್ದಾರೆ ಇದರಿಂದ ಚರಂಡಿ ಸ್ವಚ್ಛತೆ ಕಾರ್ಯಕ್ಕೆ ಅಡ್ಡಿಯಾಗುತ್ತದೆ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿ ಮುಗ್ಗಟ್ಟುಗಳ ಮುಂಭಾಗದಲ್ಲಿ ಚರಂಡಿ ಸ್ವಚ್ಛತಾ ಕಾರ್ಯಗಳಿಗೆ ಜಾಗವನ್ನು ಬಿಟ್ಟು  ಕೊಂಡು ತಮ್ಮ ತಮ್ಮ ಕಟ್ಟಡಗಳನ್ನು ಮಾಡಿಕೊಂಡಿದ್ದರೆ ಮಳೆ ಬಂದರೆ ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗುವುದು ತಪ್ಪಿದಂತಾಗುತ್ತಿತ್ತು ಆದರೆ ಮುಖ್ಯ ರಸ್ತೆಗಳಲ್ಲೇ ಚರಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾರೆ ಮುಖ್ಯರಸ್ತೆ ಮತ್ತು ಇತರೆ ಭಾಗಗಳಲ್ಲಿ ಚರಂಡಿ ಗಟಾರಗಳ ಮೇಲ್ಭಾಗದಲ್ಲಿ ಕಟ್ಟಡಗಳನ್ನು ಮಾಡುವದರಿಂದ ಚರಂಡಿಗಳನ್ನು ಸ್ವಚ್ಛತೆ ಮಾಡುವುದಕ್ಕೆ ಹೇಗೆ ಸಾಧ್ಯ ವಾಗುತ್ತದೆ . ಅಂಗಡಿ ಮುಗ್ಗಟ್ಟು ಮನೆಯ ಮುಂಭಾಗದಲ್ಲಿ  ಚರಂಡಿಗಳನ್ನು ಸ್ವಚ್ಛತೆ ಮಾಡುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಟ್ಟಡಗಳನ್ನು ಮಾಡಿಕೊಳ್ಳಬೇಕು ಮಳೆಯ ನೀರು ಗಟಾರದಲ್ಲಿ   ಸರಾಗ ವಾಗಿ ಹರಿಯದಿದ್ದರೆ ರಸ್ತೆ ಮೇಲೆ ಅಂಗಡಿ ಮನೆಗಳಲ್ಲಿ ನೀರು ನಿಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆದ್ದರಿಂದ ಸಾರ್ವಜನಿಕರು ಸ್ವಚ್ಛತೆ ಕಾರ್ಯ ಮಾಡುವುದಕ್ಕೆ ನಗರಸಭೆ ಅಧಿಕಾರಿಗಳು ಪೌರ ಸಿಬ್ಬಂದಿಗಳೊಂದಿಗೆ ಕೈಜೋಡಿಸಿದಾಗ ಸ್ವಚ್ಚತೆ ಮಾಡುವುದಕ್ಕೆ ಸಹಕಾರಿಯಾಗುತ್ತದೆ ಇಂಥ ಅಕಾಲಿಕ ಮಳೆ ಬಂತೆಂದರೆ ನೀರು ಗಟಾರದಲ್ಲಿ ಸರಾಗವಾಗಿ ಹರಿದರೆ ರಸ್ತೆ ಮೇಲೆ ಮನೆ ಅಂಗಡಿಗಳಲ್ಲಿ ನೀರು ನುಗ್ಗುವುದು ತಪ್ಪಿದಂತಾಗುತ್ತದೆ ಮುಖ್ಯ ರಸ್ತೆಗಳಲ್ಲಿ ಚರಂಡಿಗಳು ಹೂಳು ತೆಗೆದ ನಂತರ ಬಡಾವಣೆಗಳಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗುತ್ತೇವೆ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಿ ಸ್ವಚ್ಛತೆ ಕಾರ್ಯವನ್ನು ಮಾಡೋದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಹೇಳಿದರು ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಕ ಎಚ್ ಭರ್ಮಪ್ಪ . ದಫೇದಾರ್  ಮಹಾದೇವಯ್ಯ .ಪೌರ ಕಾರ್ಮಿಕ ಸಿಬ್ಬಂದಿ ವರ್ಗದವರು ಹೂಳು ತೆಗೆಯುವ ಕಾರ್ಯದಲ್ಲಿ ಇದ್ದರು 

Attachments area