ಹೂಲಗೇರಿ ಹೇಳಿಕೆಗೆ ತಿರುಗೇಟು ನೀಡಿದ ಬಯ್ಯಾಪುರ

ಲಿಂಗಸುಗೂರ,ಜೂ.೦೯-
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘ ಸಂಸ್ಥೆ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಲಿಂಗಸುಗೂರ ಕ್ಷೇತ್ರದ ಮಾಜಿ ಶಾಸಕರು ಅಮರೇಗೌಡ ಬಯ್ಯಾಪೂರ ಕ್ಷೇತ್ರದಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದರೆ ನನ್ನ ಹೆತ್ತ ತಾಯಿಗೆ ದ್ರೋಹ ಬಗೆದಂತೆ ಹೂಲಗೇರಿ ರಾಜಕೀಯಕ್ಕೆ ಲಿಂಗಸುಗೂರು ಕ್ಷೇತ್ರಕ್ಕೆ ಬರಬೇಕಾದರೆ ಅಮರೇಗೌಡ ಪಾಟೀಲ ಬಯ್ಯಾಪುರ ಇವರು ಕಾರಣ ಎಂದು ಮರೆತು ನನ್ನ ಬೆಂಬಲಿಗರಿಗೆ ನೋವು ತರುವ ರೀತಿಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡುವ ಮುಖಾಂತರ ರಾಜಕೀಯ ಗುರುವನ್ನು ಮರೆತು ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಎಸ್ ಹೂಲಗೇರಿಗೆ ತಿರುಗೇಟು ನೀಡುವ ಮೂಲಕ ಅಮರೇಗೌಡ ಪಾಟೀಲ ಬಯ್ಯಾಪುರ ವಾಗ್ದಾಳಿ ನಡೆಸಿದರು.
ನಾನು ಯಾರ ಬೆನ್ನಿಗೂ ಚೂರಿಹಾಕುವ ಕೆಲಸ ಮಾಡಿಲ್ಲ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸಮಾಡಿದ್ದೇನೆ. ಮಾಜಿ ಶಾಸಕ ಹೂಲಗೇರಿಯವರು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅದನ್ನ ಅವರು ಸಾಬೀತು ಮಾಡಿದ್ದೇ ಆದಲ್ಲಿ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರು ಸವಾಲು ಹಾಕಿದರು.
ಅವರು ಲಿಂಗಸುಗೂರಿನ ಬಸವೇಶ್ವರ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯನ್ನ ಉದ್ಧೇಶಿಸಿ ಮಾತನಾಡಿ, ಹೂಲಗೇರಿಯವರಿಗೆ ಎಲ್ಲಾ ಚುನಾವಣೆಗಳನ್ನು ಅವರೊಂದಿಗೆ ಇದ್ದು, ಅವರ ಗೆಲುವಿಗೆ ಶ್ರಮಿಸಿದ್ದೇನೆ. ಆದರೆ ಅವರೇ ಇಂದು ಚುನಾವಣೆಯಲ್ಲಿ ಸೋತ ಬಳಿಕ ಹತಾಷೆಯ ಮಾತುಗಳನ್ನ ಆಡಿ ನನ್ನ ಮೇಲೆ ಇಲ್ಲದ ಆರೋಪಗಳನ್ನು ಮಾಡಿದ್ದಾರೆ.
ಅವರ ಸೋಲಿಗೆ ಅವರೇ ಕಾರಣರೇ ಹೊರತು ಬೇರ್ಯಾರು ಅಲ್ಲ. ಅವರು ಪಕ್ಷದ ಕೆಲವೊಂದು ಹಿರಿಯ ನಾಯಕರನ್ನ ಕಡೆಗಣಿಸಿ, ಅವರೊಂದಿಗೆ ಅಂತರವನ್ನ ಕಾಯ್ದುಕೊಳ್ಳುವ ಕೆಲಸವನ್ನ ಮಾಡಿದ್ದರು. ಅದನ್ನ ನಾನೇ ಸ್ವತಃ ಪಕ್ಷದ ತಾಲೂಕಧ್ಯಕ್ಷರಾದ ಭೂಪನಗೌಡ ಅವರಿಗೆ, ಮುಖಂಡರಾದ ಪಾಮಯ್ಯ ಮುರಾರಿಯವರಿಗೆ ಹಲವಾರು ಬಾರಿ ತಿಳಿಸಿದ್ದೇನೆ. ಅವರಿಗೂ ಕೂಡ ತಿಳಿಸುವ ಪ್ರಯತ್ನ ಮಾಡಿದ್ದೇನೆ.
ಮೊದಲು ಅವರು ಸೋಲಿನ ಹತಾಷೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಕೊಂಡಿದ್ದೇ ಆದರೆ ಮೊನ್ನೆ ಸಚಿವರಾದ ಬೋಸರಾಜ ಅವರ ಅಭಿನಂದನ ಕಾರ್ಯಕ್ರಮದ ವೇದಿಕೆಯ ಮೇಲೆಯೂ ಮಾಜಿ ಶಾಸಕ ಡಿ.ಎಸ್ ಹೂಲಗೇರಿ ಅವರು ಪರೋಕ್ಷವಾಗಿ ಅದನ್ನು ಹೇಳುವ ಮೂಲಕ ಗಂಭೀರ ಆರೋಪ ಮಾಡಿದ್ದು ಸರಿಯಲ್ಲ ಎಂದು ಹೂಲಗೇರಿ ವಿರುದ್ಧ ಮಾಜಿ ಸಚಿವ ಕಾಂಗ್ರೆಸ್ ನಾಯಕ ಅಮರೇಗೌಡ ಪಾಟೀಲ ಬಯ್ಯಾಪುರರವರು ಕುಟುಕಿದರು.
ಹಿತೈಷಿಗಳಿಗೆ ಮತ್ತು ಕಾರ್ಯಕರ್ತರಿಗೆ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕಾಗಿದೆ. ಅಲ್ಲದೇ ಕ್ಷೇತ್ರದ ಜನತೆ ಇಂದಿಗೂ ನನ್ನ ಮೇಲೆ ಪ್ರೀತಿ ಅಭಿಮಾನವನ್ನ ಇಟ್ಟುಕೊಂಡಿದ್ದಾರೆ. ಹಾಗಾಗಿ ಜನರಿಗೂ ನಾನೂ ಉತ್ತರಿಸಬೇಕಾಗಿರುವುದರಿಂದ ಈ ಸುದ್ದಿಗೋಷ್ಠಿಯ ಮೂಲಕ ಸ್ಪಷ್ಟಪಡಿಸಲುತ್ತಿದ್ದೇನೆ.
ಹೂಲಗೇರಿಯವರ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಪಕ್ಷನಿಷ್ಠೆಯಿಂದ ಇದ್ದೇನೆ. ಮುಂದೆಯೂ ಇರುತ್ತೇನೆ. ನಾನು ಯಾರ ವಿರುದ್ಧವೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ಅಲ್ಲದೇ ಅವರೇ ನನ್ನ ಕ್ಷೇತ್ರದ ಮತದಾರರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಕೂಡ ಅವರಿಗೆ ಟಿಕೆ ಟ್ ಸಿಗಲಿ ಎಂದೇ ನಾನು ಹಾರೈಸಿದ್ದೆ. ಆದರೆ ಅದೆಲ್ಲವನ್ನ ಮರೆತು ಅವರು ಈ ರೀತಿ ಹೇಳಿಕೆ ನೀಡಿರುವುದು ಬೇಸರ ಮೂಡಿಸಿದ್ದು, ಈ ಕುರಿತು ಪಕ್ಷದ ಹೈ ಕಮಾಂಡಗೆ ದೂರು ಸಲ್ಲಿಸಲಾಗುವುದು. ಒಂದು ವೇಳೆ ಅವರು ನನ್ನ ಮೇಲಿನ ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಸವಾಲು ಹಾಕಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ ಸೇರಿದಂತೆ ಇತರರು ಇದ್ದರು.