ಹೂಲಗೇರಿ ವಿರುದ್ದ ಹೇಳಿಕೆ ಖಂಡನೀಯ ಭೂಪನಗೌಡ ಪಾಟೀಲ

ಲಿಂಗಸುಗೂರು.ಏ.೦೨-ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಶಾಸಕ ಡಿ.ಎಸ್ ಹೂಲಗೇರಿ ವಿರುದ್ಧ ಮೇಲಿಂದ ಮೇಲೆ ಗುಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳುತ್ತಿರುವುದು ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ಲ ಹೇಳಿದರು.
ರವಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ್ಪಾರನಂದಿಹಾಳ ಗ್ರಾಮ ಪಂಚಾಯಿತಿ ವಿಷಯದಲ್ಲಿ ಅನಗತ್ಯವಾಗಿ ಹೂಲಗೇರಿ ಹೆಸರು ಎಳೆದು ತರುತ್ತಿರುವುದು ಸರಿಯಲ್ಲ. ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಾಗಾದರೆ, ವೀರನಗೌಡ ಲೆಕ್ಕಿಹಾಳ ವಾಹನ ಚಾಲಕ ಕಂಪ್ಯೂಟರ ಆಪರೇಟರಗೆ ದೂರವಾಣಿ ಮೂಲಕ ಬೆದರಿಕೆ ಹಾಕಿರುವುದನ್ನು ಮುಂದಿಟ್ಟು ಮಾಜಿ ಶಾಸಕ ಮಾನಪ್ಪ ವಜ್ಜಲ ಗುಂಡಾಗಿರಿ ಮಾಡಿಸುತ್ತಿದ್ದಾರೆ ಎಂದು ಹೇಳಬಹುದೆ? ಎಂದು ಸವಾಲು ಹಾಕಿದರು.
ಹಿರಿಯರ ಬಗ್ಗೆ ಆರೋಪ ಮಾಡುವಾಗ ಯಾರೆ ಆಗಲಿ ಅರಿತು ಹೇಳಿಕೆ ನೀಡಬೇಕು. ವೀರನಗೌಡರ ಕಾರ ಚಾಲಕ ಬೆದರಿಕೆ ಹಾಕಿರುವ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂಬ ಸಂದೇಶ ನೀಡಿದರು.
ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ, ಮುಖಂಡರಾದ ಗುಂಡಪ್ಪ ಸಾಹುಕಾರ, ಪರಶುರಾಮ ನಗನೂರ ಇದ್ದರು.