ಹೂಡಿಯಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ

ಕೆ.ಆರ್.ಪುರ,ನ.೨೯- ನಾಡು ನುಡಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮರಗಿಡಗಳನ್ನು ಬೆಳಸಿ ನಮ್ಮ ಸುತ್ತಮುತ್ತಲಿನ ಪರಿಸರ ವನ್ನು ಸ್ವಚ್ಛತೆ ಯಾಗಿ ಇಡಬೇಕು ಆ ನಿಟ್ಟಿನಲ್ಲಿ ಯುವ ಪೀಳಿಗೆ ಮಹತ್ವದ ಕಾರ್ಯ ಮಾಡಬೇಕೆಂದು ಭಾರತೀಯ ಸೇವಾ ಸಮತಿಯ ರಾಜ್ಯಾಧ್ಯಕ್ಷ ರಾಮಚಂದ್ರ ಅವರು ಮನವಿ ಮಾಡಿದರು.
ಮಹದೇವಪುರ ಕ್ಷೇತ್ರದ ಹೂಡಿಯಲ್ಲಿ ಭಾರತೀಯ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ೬೮ ನೇ ಕನ್ನಡ ರಾಜೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಸಂಸ್ಕೃತಿ,ಸಾಹಿತ್ಯ, ಕಲೆ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯ ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನೀಡುವ ಕಾರ್ಯವಾಗಬೇಕೆಂದು ನುಡಿದರು. ಅಖಂಡ ಕರ್ನಾಟಕದ ಜೀವನ, ಸಂಸ್ಕೃತಿ, ದೇಶೀಯತೆ, ಸಂಗೀತ, ಕಲೆ, ಸಾಹಿತ್ಯಗಳ ವಿಶಿಷ್ಟ ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು. ಒತ್ತಡದ ಜೀವನದ ನಡುವೆಯೂ ನಾಡುನುಡಿಯನ್ನು ಉಳಿಸಿ,ಬೆಳೆಸಿ ಪ್ರಕೃತಿಮಾತೆಗೆ ಖುಣ ತೀರಿಸುವ ಕಾರ್ಯಮಾಡಬೇಕೆಂದು ನುಡಿದರು. ಗಿಡಮರಗಳನ್ನು ಬೆಳೆಸುವ ಕಾರ್ಯವನ್ನು ಯುವಪೀಳಿಗೆ ಮಾಡಬೇಕು,ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಕೊಡುಗೆ ನೀಡಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಆಟೋ ಚಾಲಕ ಸಂಘದವರಿಂದ ಭುವನೇಶ್ವರಿ ದೇವಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ರಥಯಾತ್ರೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಚಿಂತಾಮಣಿ ಅಮರ್,ಹೂಡಿ ಪಿಳ್ಳಪ್ಪ,ಅಬ್ದುಲ್, ಮುನಿರಾಜು ಹಾಗೂ ಸಮಿತಿಯ ಸದಸ್ಯರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.