ಹೂಗಾರ ಸಮಾಜ ಜಿಲ್ಲಾಧ್ಯಕ್ಷರ ಮನೆಗೆ ಕೆ.ದೇವಣ್ಣ ನಾಯಕ ಭೇಟಿ

ರಾಯಚೂರು.ಫೆ.೦೬- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಅಕಾಂಕ್ಷಿಯಾದ ಸುಪ್ರೀಂ ಕೋರ್ಟ್ ನ್ಯಾಯವಾದಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ. ದೆವಣ್ಣ ನಾಯಕ ಅವರು ಹೂಗಾರ ಸಮಾಜದ ಜಿಲ್ಲಾ ಅದ್ಯಕ್ಷರ ಮನೆಗೆ ಭೇಟಿ ನೀಡಿ ಸಮಾಜದ ಬೆಂಬಲ ಯಾಚಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರು, ನಮ್ಮ ಸಂಪೂರ್ಣ ಬೆಂಬಲ ನಿಮಗೆ ಇದೆ ಎಂದು ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಬಸವರಾಜ ದೇವದುರ್ಗ, ಕಾರ್ಯದರ್ಶಿ ಅಂಬರೀಷ್, ನರಸಣ್ಣ ಗಾರಾಲದಿನ್ನಿ, ಸೂಗಪ್ಪ ಗುಂಜಳ್ಳಿ, ವಿರೇಶ ಹೂಗಾರ ಆಶಾಪೂರು, ಹಿರಿಯ ವಕೀಲರಾದ ಶಿವರಾಜ ಪಾಟೀಲ ಇಟಗಿ, ಎಸ್.ಜಿ.ಮಠ ವಕೀಲರು, ಶ್ರೀ ಶ್ರೀಕಾಂತ್ ರಾವ್ ವಕೀಲರು, ಮಾಜಿ ಕೆಪಿಎಸ್ಸಿ ಸದಸ್ಯರು, ಅಬ್ದುಲ್ ಹಮೀದ್ ವಕೀಲರು, ಕೆ.ನರಸಿಂಹ ನಾಯಕ್ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ, ಎಸ್.ಟಿ ಸಮಾಜದ ವಿಭಾಗ ಜಿಲ್ಲಾ ಅದ್ಯಕ್ಷರು, ಗುರುಸ್ವಾಮಿ ಯದವ್ ಕಲ್ಲೂರು, ಹಾಗು ಬಸವರಾಜ ಆಶಾಪೂರು ವಕೀಲರು ಹೈಕೋರ್ಟ್ ಆಫ್ ಕರ್ನಾಟಕ ಬೆಂಗಳೂರು. ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು.