ಹೂಗಾರ ಸಮಾಜ :ಆಹಾರದ ಕಿಟ್ ವಿತರಣೆ

ರಾಯಚೂರು.ಮೇ.೩೦-ಜಿಲ್ಲಾ ಹೂಗಾರ ಸಮಾಜದಿಂದ ಸಂಕಷ್ಟದಲ್ಲಿರುವ ಸಮುದಾಯದ ಕುಟುಂಬಗಳಿಗೆ ಆಹಾರದ ಕಿಟ್ ಗಳ ವಿತರಣೆ ಕಾರ್ಯಕ್ಕೆ ಸಂಘದ ಹಂಗಾಮಿ ಅಧ್ಯಕ್ಷರಾದ ಈರಣ್ಣ ಹೂಗಾರ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ ವಕೀಲರು ಜಂಟಿಯಾಗಿ ಚಾಲನೆ ನೀಡಿದರು.
ಅವರಿಂದು ತಾಲೂಕಿನ ದೇವಸೂಗೂರಿನ ಶ್ರೀ ಸೂಗೂರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ಹಂಗಾಮಿ ಅಧ್ಯಕ್ಷ ಈರಣ್ಣ ಹೂಗಾರ್ ಮಾತನಾಡುತ್ತ ಕೊರೊನಾ ಲಾಕ್‌ಡೌನ್ ಸಂಕಷ್ಟದಲ್ಲಿರುವ ಹೂಗಾರ ಸಮಾಜದ ಕುಟುಂಬಗಳಿಗೆ ನೆರವು ನೀಡಲು ಮನಸು ಮಾಡಿದಾಗ ನಮ್ಮ ಸಮಾಜದ ದಾನಿಗಳು ಮುಂದೆ ಬಂದಿದ್ದರಿಂದ ನಮ್ಮ ಸಂಕಲ್ಪ ಈಡೇರಿ ಸುವ ಕಾರ್ಯಕ್ಕೆ ಪ್ರೋತ್ಸಾಹ ಸಿಕ್ಕಿದೆ ಎಂದರು.
ಸಮಾಜದ ಸೇವೆ ಮಾಡುವ ಮನಸು ಗಳು ಕೈ ಜೋಡಿಸಿದರೆ ಇಲ್ಲವುಗಳ ಮಧ್ಯೆ ಎಲ್ಲವೂ ಸಾಧ್ಯ.
ಚಾಲನೆ ನೀಡಲಾಗಿದೆ ಈ ಕಾರ್ಯ ಜಿಲ್ಲಾದ್ಯಂತ ಸಂಕಷ್ಟದಲ್ಲಿರುವ ನಮ್ಮವರಿಗೆ ತಲುಪಿಸುವ ಕಾರ್ಯ ಸಾಗಲಿದೆ. ಎಲ್ಲರ ಸಹಕಾರ ಸಂಘ, ಸಮಾಜದ ಮೇಲಿರಲಿ ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಹನುಮಂತರಾಯ ಹೂಗಾರ ಚಿಕ್ಕಸೂಗೂರು, ವೀರೇಶ ಹೂಗಾರ ದೇವಸೂಗುರು, ಶಿವುಕು ಮಾರ ಹೂಗಾರ ದೇವಸುಗೂರು, ಹನುಮೇಶ ಹೂಗಾರ ಕಂದಾಯ ಇಲಾಖೆ, ವಿಶ್ವನಾಥ ಹೂಗಾರ ಚಿಂಚರಕಿ, ವೆಂಕಟೇಶ ಹೂಗಾರ, ಮಲ್ಲಿಕಾರ್ಜುನ ಹೂಗಾರ ಗಂಜ್ ಪ್ರಿಂಟಿಂಗ್ ಪ್ರೆಸ್, ಶಶಿಧರ ಹೂಗಾರ್ ಮಟಮಾರಿ, ಭೀಮಣ್ಣ ಹೂಗಾರ್ ಟೈಲರ್ ತಿಡಿಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.