ಹೂಕೋಸಿನಲ್ಲಿದೆ ಸಮೃದ್ಧ ಪೋಷಕಾಂಶ

ಈರುಳ್ಳಿ, ಟೊಮೆಟೋವನ್ನು ನಾವು ದಿನನಿತ್ಯವೂ ಬಳಸಿದಂತೆ ಹೂಕೋಸನ್ನು ಕೂಡ ಬಳಸಿದರೆ ಇದರಿಂದ ಹಲವಾರು ರೀತಿಯ ಲಾಭಗಳಿವೆ. ಹೂಕೋಸು ತುಂಬಾ ರುಚಿಯಾಗಿರುವ ಕಾರಣದಿಂದ ಇದರಿಂದ ಹಲವಾರು ರೀತಿಯ ಪದಾರ್ಥಗಳನ್ನು ಮಾಡಬಹುದು. ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಹೂಕೋಸಿನಲ್ಲಿ ಆ?ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ. ಸಮೃದ್ಧ ಪೋಷಕಾಂಶಗಳ ಆಗರ ಹೂಕೋಸು

ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದರ ಜೊತೆಗೆ, ದೇಹವು ವಯಸ್ಸಾದಂತೆ ಕಾಣುವುದು ತಪ್ಪುತ್ತದೆ. ಇದರಲ್ಲಿ ವಿಟಮಿನ್ ಸಿ, ಸಿನ್ಮಿಕ್ ಆ?ಯಸಿಡ್, ಬೆಟಾ ಕ್ಯಾರೋಟಿನ್ ಮೊದಲಾದ ಪ್ರಮುಖ ಅಂಶಗಳಿವೆ. ಹೂಕೋಸಿನಲ್ಲಿರುವ ಸಲ್ಫೊರ್ಪನೆ ಎನ್ನುವ ಅಂಶವು ಕ್ಯಾನ್ಸರ್ ಕೋಶಗಳನ್ನು ತೆಗೆದು ಹಾಕುವುದು.

ಹೂಕೋಸಿನಲ್ಲಿ ವಿಟಮಿನ್ ಬಿ೧, ಬಿ೨, ಬಿ೩, ಬಿ೫, ಬಿ೬ ಮತ್ತು ಬಿ೯ ಇದೆ. ಇದರಲ್ಲಿ ವಿಟಮಿನ್ ಕೆ ಮತ್ತು ಒಮೆಗಾ ೩ ಕೊಬ್ಬಿನ ಆ?ಯಸಿಡ್ ಇದೆ. ಇದರಲ್ಲಿ ಪೊಟಾಶಿಯಂ, ಪ್ರೋಟೀನ್, ವಿಟಮಿನ್ ಸಿ, ಮೆಗ್ನಿಶಿಯಂ ಮತ್ತು ಪ್ರೊಸ್ಪರಸ್ ಒಳಗೊಂಡಿದೆ.

ಹೂಕೋಸಿನಲ್ಲಿ ಥಿಯೊಕ್ಯನೇಟ್ಸ್ ಎನ್ನುವ ಅಂಶವಿದೆ. ಇದು ವಿಷಕಾರಿ ಅಂಶಗಳನ್ನು ಹೊರಹಾಕಲು ಯಕೃತ್‌ಗೆ ನೆರವಾಗುವುದು. ವಿಷಕಾರಿ ಅಂಶಗಳನ್ನು ಹೊರಹಾಕುವ ಪ್ರಮುಖ ತರಕಾರಿ ಇದಾಗಿದೆ.
ಕರುಳಿನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಜನನಾಂಗದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಮೂತ್ರಕೋಶದ ಕ್ಯಾನ್ಸರ್ ನ್ನು ತಡೆಯುತ್ತದೆ ಎಂದು ಕೆಲವೊಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ಹೂಕೋಸಿನಲ್ಲಿ ನಾರಿನಾಂಶವು ಇರುವುದರಿಂದ ಅದು ಜೀರ್ಣಕ್ರಿಯೆಗೆ ಪ್ರಮುಖವಾಗಿ ನೆರವಾಗುವುದು. ಇದರಿಂದ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಉತ್ತಮವಾಗುವುದು.

ಇದರಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ನಿಯಮಿತವಾಗಿ ಇದರ ಸೇವನೆ ಮಾಡಿದರೆ ಅರ್ಥಟೀಸ್, ಕರುಳಿನ ಉರಿಯೂತ ರೋಗ ಮತ್ತು ಮಧುಮೇಹವನ್ನು ತಡೆಯಬಹುದಾಗಿದೆ.

ಹೂಕೋಸು ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಯುವುದು. ಇದು ರಕ್ತದ ಕೋಶಗಳ ಉರಿಯೂತವನ್ನು ತಡೆದು ಇದಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಯುವುದು. ನಿಮ್ಮ ದೈನಂದಿನ ಆಹಾರದಲ್ಲಿ ಹೂಕೋಸನ್ನು ಸೇರಿಸಿ ಇದರಿಂದ ಆಗುವಂತಹ ಲಾಭಗಳನ್ನು ಪಡೆಯಿರಿ.