ಹುಬ್ಬಳ್ಳಿ,ಜು.7: ಹುಬ್ಬಳ್ಳಿ ಧಾರವಾಡ ನೂತನ ಆಯುಕ್ತರಾಗಿ ಡಾ. ಈಶ್ವರ್ ಉಳ್ಳಾಗಡ್ಡಿ ಅವರು ಇಂದು ಅಧಿಕಾರ ವಹಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನೆ ಮನೆಗೆ ತೆರಳಿ ಕಸ ಸಂಗ್ರಹ ನಡೆಸಲಾಗುತ್ತದೆ. ಕುಡಿಯುವ ನೀರಿನ, ಆಸ್ತಿ ತೆರಿಗೆ ಪಾವತಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದರು.
ಅವಳಿನಗರದಲ್ಲಿ ಎಲ್ ಆ್ಯಂಡ್ ಟಿ ಕಂಪನಿ ನೀರಿನ ಸರಬರಾಜು ನಿರ್ವಹಣೆ ಮಾಡುತ್ತಿದ್ದು, ಇನ್ನೂ ಕೆಲವು ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಇದೆ. ಅದನ್ನು ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಪೌರ ಕಾರ್ಮಿಕರಿಗೆ ನಿತ್ಯ ಉತ್ತಮ ಆಹಾರ, ಆರೋಗ್ಯ ತಪಾಸಣೆ, ಕೆಲಸ ಮಾಡಲು ಜಾಕೆಟ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಸುರಕ್ಷತಾ ಸಾಮಗ್ರಿ ಕಡ್ಡಾಯವಾಗಿ ನೀಡಲು ಸೂಚಿಸುತ್ತೇನೆ ಎಂದು ಅವರು ಹೇಳಿದರು.
ಇ ಆಸ್ತಿ ಕಡ್ಡಾಯವಾಗಿದೆ. ಸರ್ವರ್ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಅವರು ಹೇಳಿದರು.