ಹುಸೇನ್ ನಗರದಲ್ಲಿ ಶಾದಿ ಮೇಳ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.16: ಇಲ್ಲಿನ ಹುಸೇನ್ ನಗರದ 8 ನೇ ಕ್ರಾಸ್ ನಲ್ಲಿ ಇಂದು  ಬಿ.ಎಂ.ರಫಿ ಅವರ ನೇತೃತ್ವದಲ್ಲಿ ಜಾಸ್ಮಿನ್ ಮುಸ್ಲಿಂ ಕನ್ಸಲ್ಟೆನ್ಸಿ ಇವರಿಂದ ಶಾದಿ ಮೇಳ ಹಮ್ಮಿಕೊಂಡಿತ್ತು.
ಮೇಳಕ್ಕೆ ಬೆಳಗಾವಿ, ಬೆಂಗಳೂರು, ಗದಗ ಬಳ್ಳಾರಿ ಮೊದಲಾದ ಕಡೆಗಳಿಂದ ಎರಡು ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.