ಹುಸಿಯಾದ ಶಾಸಕರ ಭರವಸೆ; ಮಾಜಿ ಶಾಸಕ ಎಚ್.ಪಿ.ರಾಜೇಶ್ ಆರೋಪ

ಜಗಳೂರು.ಜ.೪; ವಿಧಾನ ಸಭಾ ಕ್ಷೇತ್ರದಲ್ಲಿ 15 ಕ್ಕೂ ಆಧಿಕ ಗ್ರಾಮಪಂಚಾಯಿತಿಗಳು ಕಾಂಗ್ರೆಸ್ ಪಕ್ಷದ ಆಡಳಿತದ ವಶಕ್ಕೆ ಸೇರಲಿವೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಅಭಿಪ್ರಾಯಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನ  22 ಗ್ರಾಮಪಂಚಾಯಿತಿ ಹಾಗೂ ಅರಸೀಕೆರೆ ಹೋಬಳಿ 7 ಗ್ರಾಮಪಂಚಾಯಿತಿಗಳು ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 534 ಸ್ಥಾನಗಳಿಗೆ 300ಕ್ಕೂ ಅಧಿಕ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಮುಂಬರುವ ತಾಲೂಕು ಪಂಚಾಯಿತಿ ಜಿಲ್ಲಾಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ  ಗೆಲುವಿನ ಕೈಗನ್ನಡಿಯಾಗಿವೆ ಎಂದರು.ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸಿದ ಪಕ್ಷ ಕಾರ್ಯಕರ್ತರಿಗೆ ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳಿಗೆ ,ಶಾಂತಿಯುತ ಮತದಾನಕ್ಕೆ ಸಹಕರಿಸಿದ ಮತದಾರರಿಗೆ ಅಬಿನಂದನೆಗಳನ್ನು ಸಲ್ಲಿಸಿದರು.
ಬಿಜೆಪಿ ಸರ್ಕಾರದ ಮತ್ತು ಸ್ಥಳಿಯ ಶಾಸಕರ ನಿರ್ಲಕ್ಷ್ಯದಿಂದ ಅಭಿವೃದ್ದಿ ಕಾಮಗಾರಿಗಳು ಕುಂಠಿತವಾಗಿವೆ ಸಮಿತಿ ರಚನೆಯಾಗಿದ್ದರೂ  ಬಗರ್ ಹುಕ್ಕುಂ ಸಾಗುವಳಿ ಹಕ್ಕು ಪತ್ರ ವಿತರಿಸದೆ ಭೂಒಡೆತನ ಯೋಜನೆ ಸಕಾರಗೊಂಡಿಲ್ಲ ಅಲ್ಲದೆ  ವಸತಿಯೋಜನೆಯಡಿ ಸೂರು ಕಲ್ಪಿಸಿಲ್ಲ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಬಿಲ್ ಪಾವತಿಯಾಗಿಲ್ಲ ಎಂದು ಆರೋಪಿಸಿದರು.
ಶಾಸಕರಿಂದ ಸುಳ್ಳು ಭರವಸೆ:ನನ್ನ ಅವಧಿಯಲ್ಲಿ ಮರೇನಹಳ್ಳಿ,ಮಾಳಮ್ಮನಹಳ್ಳಿ ಸೇರಿ ಕೆಲ ಹಳ್ಳಿಗಳನ್ನೊಳಗೊಂಡಂತೆ ಪುರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ವಿಫಲಹೊಂದಿದೆ. ಆದರೆ ಪ್ರಸಕ್ತವಾಗಿ ಜನಗಣತಿ ಪ್ರಕ್ರಿಯೆಯೊಳಗೆ ಸಚಿವ ಸಂಪುಟ ಸಭೆಯಲ್ಲಿ ಹೊಳಲ್ಕೆರೆ ಶಾಸಕರಂತೆ ಜೊತೆ  ಆಡಳಿತ ಪಕ್ಷದಲ್ಲಿ  ಶಾಸಕರು  ಪ್ರಸ್ತಾವನೆಗೆ ಪ್ರಯತ್ನಿಸದೆ ಇದೀಗ ಸಮಯ ಕೈಮೀರಿದಾಗ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿರುವುದು  ಹುಸಿಯಾಗುವುದು ತಪ್ಪು ಮಾಹಿತಿ ಹೇಳಿ ಜನರ ದಿಕ್ಕುತಪ್ಪಿಸಬಾರದು ಕ್ಷೇತ್ರದ  ಅಭಿವೃದ್ದಿಗೆ ಶ್ರಮಿಸಲಿ ನಮ್ಮ ಸಹಕಾರವಿದೆ ಟೀಕಿಸಿದರು.
ಕಾಂಗ್ರೆಸ್ ನ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ,ಕ್ಷೇತ್ರದಲ್ಲಿ  ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷ ಬಲವರ್ಧನೆಗೊಳಿಸಲಾಗುವುದು ಅಲ್ಲದೆ ಚುನಾವಣೆ ಆಯೋಗದ ಮಾರ್ಗಸೂಚಿಯಂತೆ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟ್ ನೇಮಿಸಿ ಅವರ ಮುಖಾಂತರ ಮತದಾರರ ಪರಿಷ್ಕೃತ ಪಟ್ಟಿಗೆ ಬಿಎಲ್ ಓ ಗಳಿಗೆ ಮಾಹಿತಿ ಒದಗಿಸಲಾಗುವುದು ಏಜೆಂಟ್ ಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ ವಿವಿಧ ಘಟಕಗಳ ಪದಾಧಿಕಾರಿಗಳಾದ ಪಲ್ಲಾಗಟ್ಟೆ ಶೇಖರಪ್ಪ ಲೊಕೇಶ್ ಬಿ ವೆಂಕಟೇಶ್ ಮುಖಂಡರಾದ ಮುಖಂಡರಾದ ಚಿತ್ತಪ್ಪ ಗೋಡೆ ಪ್ರಕಾಶ್  ಮರೇನಹಳ್ಳಿ ಶೇಖರಪ್ಪ ಹಸಾದುಲ್ಲಾ ಸೇರಿದಂತೆ  ಇತರರು ಭಾಗವಹಿಸಿದ್ದರು.