ಹುಸಿಯಾದ ನಿರೀಕ್ಷೆ, ಇದೊಂದು ನಿರಾಶಾದಯಕ ಬಜೆಟ್: ಉಮೇಶ್ ಮುದ್ನಾಳ

ಶಹಾಪುರ :ಜು.9: ಸಿಎಂ ಸಿದ್ದರಾಮಯ್ಯ ಐತಿಹಾಸಿಕ 14 ನೇ ಬಜೆಟನ್ನು ಮಂಡಿಸಿದರು. ಆದ್ರೆ ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲೆ ಅತೀ ಹಿಂದುಳಿದ ಯಾದಗಿರಿ ಜಿಲ್ಲೆಗೆ ಈ ಬಜೆಟ್ ಭಾರಿ ನಿರಾಸೆಯಾಗುವಂತೆ ಮಾಡಿದೆ. ಈ ಬಾರಿ ಸಿದ್ದರಾಮಯ್ಯ ನವರ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಜಿಲ್ಲೆಯ ಜನರ ಇಟ್ಟುಕೊಂಡಿದ್ದರು. ಆದ್ರೆ ಈ ಬಜೆಟ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.