ಹುಲ್ಲಿನ ಬಣವೆಗೆ ಬೆಂಕಿ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.01: ತಾಲೂಕಿನ ಹೇಮಗುಡ್ಡದ ಹತ್ತಿರ ಹೊಲದಲ್ಲಿ ಹಾಕಲಾಗಿದ್ದ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟಿರುವ ಘಟನೆ ನಡೆದಿದೆ.
ಹೇಮಗುಡ್ಡದ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ತಿರುಮಲಯ್ಯ ಎಂಬುವವರಿಗೆ ಸೇರಿದ ಭತ್ತದ ಹುಲ್ಲಿನ ಬಣವೆ ಹನ್ನೊಂದು ಎಕರೆಯಲ್ಲಿ ಬೆಳೆದಿದ್ದ ಹುಲ್ಲು ಸಂಪೂರ್ಣ ಸುಟ್ಟುಹೋಗಿದೆ. ಅಂದಾಜು 30 ಸಾವಿರ ರೂ ನಷ್ಟ ವಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂಧಿಳಾದ ರಂಗನಾಥ್, ಅಂಬ್ರೇಶ್, ಗಾಲಿಬ್ ಸಾಬ್, ರಾಕೇಶ್ ಆಗಮಿಸಿ ಬೆಂಕಿಯನ್ನು ನಂದಿಸಿದರು.