ಹುಲ್ಲಿನ ಬಣವಗೆ ಆಕ್ಮಸಿಕ ಬೆಂಕಿ ತಗುಲಿ ಅಪಾರ ನಷ್ಟ


ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.15: ಆಕ್ಮಸಿಕ ಬೆಂಕಿ ತಗುಲಿ 20 ಎಕರೆ ಭೂಮಿಯಲ್ಲಿ ಬೆಳೆಯಲಾಗಿದ್ದ ಭತ್ತದ ಹುಲ್ಲಿನ ಬಣವಿಗೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದ ಘಟನೆ ತಾಲೂಕಿನ ಗೋಗಿಬಂಡಿ ಕ್ಯಾಂಪ್ ನಲ್ಲಿ ಗುರುವಾರ ಬೆಳಗಿನ ಜಾವ ಜರುಗಿದೆ.
ಗೂಗಿಬಂಡಿ ಕ್ಯಾಂಪಿನ ಬೈಲಪ್ಪ ಎಂಬ ರೈತ 20 ಎಕರೆ ಭೂಮಿಯಲ್ಲಿ ಬೆಳೆದ ಭತ್ತದ ಹುಲ್ಲಿನ ಬಣವೆಯನ್ನು ಗ್ರಾಮದ ಪಕ್ಕದಲ್ಲಿ ಹಾಕಿದ್ದ ಗುರುವಾರ ಬೆಳಗಿನ ಆಕ್ಮಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣ ಹುಲ್ಲು ಬೆಂಕಿಯಲ್ಲಿ ಸುಟ್ಟು ಹೋಗಿದೆ.
ದನ, ಕರು, ಎಮ್ಮೆಗಳಿಗಾಗಿ 20 ಎಕರೆ ಭೂಮಿಯಲ್ಲಿ ಬೆಳೆದ ಬತ್ತದ ಹುಲ್ಲನ್ನು ಗ್ರಾಮದ ಪಕ್ಕದಲ್ಲಿ ರೈತರು ಹಾಕಿದ್ದರು .ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒ ಭೇಟಿ ನೀಡಿದ್ದು ಪಂಚನಾಮಿ ವರದಿ ಮಾಡಿದ್ದಾರೆ. ಗೂಗಿಬಂಡಿ ಗ್ರಾಮದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತಿದ್ದು ಹೈನುಗಾರಿಕೆ ಇರುವ ಕಾರಣ ದನ,ಎಮ್ಮೆಗಳಿಗಾಗಿ ಭತ್ತದ ಹುಲ್ಲನ್ನು ಬಣವಿ ಹಾಕಿ ವರ್ಷವಿಡಿ ಬಳಕೆ ಮಾಡಲಾಗುತ್ತದೆ. ವರ್ಷವಿಡಿ ದನ,ಕರು,ಎಮ್ಮೆಗಳಿಗಾಗಿ ಸಂಗ್ರಹಿಸಿದ್ದ ಭತ್ತದ ಹುಲ್ಲಿನ ಬಣವಿ ಬೆಂಕಿಗೆ ಆವುತಿಯಾಗಿದ್ದು ಲಕ್ಷಾಂತರ ರೂ.ನಷ್ಟವಾಗಿದೆ. ಸರಕಾರ ಸೂಕ್ತ ಪರಿಹಾರ ನೀಡುವಂತೆ ರೈತ ಬೈಲಪ್ಪ ಮನವಿ ಮಾಡಿದ್ದಾರೆ.