ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳಿಗೆ ಕೊರೋನಾ ಪರೀಕ್ಷೆ

ಚಾಮರಾಜನಗರ, ಜೂ.09- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.
ಮಧುಮಲೈ ವಲಯ ಅರಣ್ಯಾಧಿಕಾರಿ ದಯಾನಂದನ್ ಮಾಹಿತಿ ನೀಡಿ, ಒಂದು ವಾರದ ಹಿಂದμÉ್ಟೀ ಆನೆ ಕ್ಯಾಂಪಿನ ಇಬ್ಬರು ಸಿಬ್ಬಂದಿಗೆ ಕೋವಿಡ್ ದೃಢವಾಗಿದ್ದು 2 ಮರಿಯಾನೆ ಸೇರಿದಂತೆ 28 ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.
ವೈದ್ಯಾಧಿಕಾರಿ ರಾಜೇಶ್ ಆನೆಗಳನ್ನು ಮಲಗಿಸಿ ಸೊಂಡಿಲಿನಿಂದ ದ್ರವವನ್ನು ತೆಗೆದುಕೊಂಡಿದ್ದು, ಉತ್ತರ ಪ್ರದೇಶದ ಲ್ಯಾಬ್‍ಗೆ ಗಂಟಲು ದ್ರವ ಮಾದರಿಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಚೆನ್ನೈ ಜೈವಿಕ ಉದ್ಯಾನವನದಲ್ಲಿ ಈ ಹಿಂದೆ ಸಿಂಹಗಳಿಗೆ ಕೋವಿಡ್ ಪಾಸಿಟಿವ್ ಆಗಿತ್ತು.