ಹುಲಿವೇಷಧಾರಿ ನಾನಲ್ಲ;ಶಾಸಕ ರೇಣುಕಾಚಾರ್ಯ

ದಾವಣಗೆರೆ.ಜೂ.೯; ನಾನು ಯಾವುದೇ ವೇಷಧಾರಿಯಲ್ಲಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಸಚಿವ ಈಶ್ವರಪ್ಪರಿಗೆ ತಿರುಗೇಟ್ ನೀಡಿದ್ದಾರೆ.ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿ ತಿರುಗೇಟು ನೀಡಿರುವ ರೇಣುಕಾಚಾರ್ಯ ಅವರು
ನನಗೆ ಹಿರಿಯರ ಬಗ್ಗೆ ಗೌರವವಿದೆ, ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲಾ.
ನನ್ನ ಬಗ್ಗೆ ಹುಲಿವೇಷ ಎಂದು ಹೇಳಿದವರು ಆತ್ಮವಾಲೋಕನ ಮಾಡಿಕೊಳ್ಳಲಿ.ಯಡಿಯೂರಪ್ಪನವರನ್ನು ರಾಜ್ಯಾದ್ಯಕ್ಷರಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ದಿ ಎಂಬುದು ತಿಳಿದಿದೆ.ರಾಜ್ಯಪಾಲರಿಗೆ ಪತ್ರ ಬರೆದು ಆಮೇಲೆ ತಿರುಗಿ ಉಲ್ಟಾ ಹೊಡೆದವರು.
ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನನ್ನನ್ನು ಯಡಿಯೂರಪ್ಪನವರ ವಿರುದ್ದ ಎತ್ತಿಕಟ್ಟಲಿಲ್ವಾ.
ನೀವು ಚುನಾವಣಾ ಪೂರ್ವದಲ್ಲಿ ಏನು ಮಾಡಿದ್ರೀ ಗೊತ್ತಿಲ್ವ.ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡ ಬೇಕು.
ಬೆಲ್ಲದ್ ಅವರೇ ನನ್ನ ಬಳಿ ಇರುವುದು 65 ಜನ ಶಾಸಕರು ಸಿಎಂ ಪರವಾಗಿ ಸಹಿ ಮಾಡಿರೊ ಪತ್ರ ಇರೋದು.ಯಾರು ಹಳೇ ಪತ್ರ ಎಂದು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಕಳುಹಿಸಿ ಕೊಡ್ತೀನಿ.
ರಾಜ್ಯಾದ್ಯಕ್ಷರು ಸೂಚಿಸಿದ್ದಕ್ಕೆ ಕೊಟ್ಟಿಲ್ಲಾ.ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ತರವಲ್ಲ
ಹಡಗಿನಲ್ಲಿ ಕೂತವರು ಹೋಲು ಕೊರೆಯಬಾರದು.
ಅವರ ಜೊತೆ ಎಲ್ಲರೂ ಮುಳುಗುತ್ತಾರೆಂದು ಟಾಂಗ್ ನೀಡಿದ್ದಾರೆ.