ಹುಲಿಗೆ ಬೇಟೆ ಆಡುವುದನ್ನು ಕಲಿಸ ಬೇಕಾಗಿಲ್ಲ

ಕೋಲಾರ,ಮೇ,೨೨- ಕಾಂಗ್ರೇಸ್ ಪಕ್ಷದ ಕೊತ್ತೂರು ಮಂಜುನಾಥ್ ಅವರು ಕೇವಲ ೨೦ ದಿನದಲ್ಲೇ ಚುನಾವಣೆಯನ್ನು ಹೇಗೆ ಗೆಲ್ಲ ಬೇಕೆಂದು ತೋರಿಸಿ ಕೊಟ್ಟಿದ್ದಾರೆ. ಇದೇ ರೀತಿ ನಾನು ಕೋಲಾರಕ್ಕೆ ಬಂದಾಗ ನಾನು ಇದೇ ರೀತಿ ಮಾಡಿ ಗೆದ್ದಿದ್ದೆ. ಅದರೆ ಈ ಬಾರಿ ನನಗೆ ಮತದಾರರ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟಿದ್ದೆ ತಪ್ಪಾಯಿತು. ಕೆಲವರು ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ. ಅದರೆ ಅವರು ಯಾರೆಂದು ಬಾಯಿ ಬಿಟ್ಟು ಹೇಳುವುದಿಲ್ಲ. ದೋಷಿಸುವುದಿಲ್ಲ, ದೊರನೂ ಮಾಡುವುದಿಲ್ಲ ಮತ್ತೆ ಅವರ ವಿಶ್ವಾಸ ಪಡೆಯಲು ಪ್ರಯತ್ನಿಸುತ್ತೇನೆ ಎಂದ ಅವರು ಹುಲಿಗೆ ಬೇಟೆ ಆಡುವುದನ್ನು ಯಾರು ಕಲಿಸ ಬೇಕಾಗಿಲ್ಲ ಎಂಬುವುದು ಮುಂದಿನ ಚುನಾವಣೆಗಳಲ್ಲಿ ತೋರಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿಯಾಗಿದ್ದ ವರ್ತೂರು ಪ್ರಕಾಶ್ ಸವಾಲ್ ಹಾಕಿದರು,
ನಗರದ ಕೋಗಿಲಹಳ್ಳಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವರ್ತೂರು ಪ್ರಕಾಶ್ ಅವರು ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡುತ್ತಾ ಹಲವಾರು ಕಾರಣಗಳಿಂದ ಚುನಾವಣೆಗಳಲ್ಲಿ ತಪ್ಪುಗಳು ನಡೆದಿದೆ ನಿಜ, ಅಂಥವರನ್ನು ನಾನು ಗುರುತಿಸಿದ್ದೇನೆ. ಅದರೆ ಅವರನ್ನು ಪ್ರಶ್ನೆಸುವ ಮೂಲಕ ದೊರ ಮಾಡಿ ಕೊಳ್ಳುವುದಿಲ್ಲ ಅವರನ್ನು ಮತ್ತೆ ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮಾಡುತ್ತೇನೆ ಎಂದರು,
ಕೋಲಾರ ವಿಧಾನ ಸಭಾ ಕ್ಷೇತ್ರದ ೨೨೦ ಗ್ರಾಮಗಳ ಬೂತ್‌ಗಳಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತ ಬಂದಿರುವುದು, ಹಿಂದುಗಳು ಇರುವ ವಾರ್ಡಿನಲ್ಲಿ ನಾವುಗಳೇ ಬಹು ಮತ ಪಡೆದಿರುವುದು ,ನಗರದ ವಾರ್ಡ ಸಂಖ್ಯೆ ೧೨,೧೩,೧೪ ರಲ್ಲಿ ಬಹುತೇಕ ವಕ್ಕಲಿಗರೇ ಇದ್ದರೂ ಸಹ ಬಿಜೆಪಿ ಪಕ್ಷಕ್ಕೆ ಬಹುಮತ ಬಂದಿದೆ. ಕಿಲಾರಿಪೇಟೆಯ ಬೂತ್‌ನಲ್ಲೂ ಬಿಜೆಪಿ ಪಕ್ಷವೇ ಲೀಡ್‌ನಲ್ಲಿರುವುದು, ಹಾರೋಹಳ್ಳಿಯ ೪ ಬೂತ್‌ಗಳಲ್ಲೂ ಬಿಜೆಪಿ ಪಕ್ಷವೇ ಲೀಡ್ ಬಂದಿದ್ದು ಎಲ್ಲರಿಗೂ ನನ್ನ ಕೃತ್ಞನತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಜೆ.ಡಿ.ಎಸ್. ಪಕ್ಷದವರು ಕೊನೆಯ ಹಂತದಲ್ಲಿ ೨.೫ ಕೋಟಿ ರೂ ಹಂಚಿಕೆ ಮಾಡಿದರೂ ಸಹ ಅವರೆಲ್ಲಾ ಕಾಂಗ್ರೇಸ್ ಪಕ್ಷಕ್ಕೆ ಮತ ಚಲಾಯಿಸಿದ್ದರಿಂದ ನಮಗೆ ಹಿನ್ನಡೆ ಉಂಟಾಯಿತು.ಗ್ರಾಮೀಣ ಭಾಗದ ಜನತೆ ಎಚ್ಚತ್ತು ಕೊಳ್ಳಬೇಕಾಗಿದೆ. ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಸೋಲೇ ನಮಗೆ ಮುಂದಿನ ಚುನಾವಣೆಯ ಗೆಲುವಿಗೆ ಮೆಟ್ಟಿಲುಗಳು ಆಗಬೇಕು. ವ್ಯಕ್ತಿಗಿಂತ ಪಕ್ಷ ಮುಖ್ಯವೆಂದು ಪರಿಗಣಿಸ ಬೇಕು. ಇದಕ್ಕೆ ನನ್ನ ಸಹೋದರ ಓಂ ಶಕ್ತಿ ಚಲಪತಿಯೇ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು,
ಸಭೆಯಲ್ಲಿ ಮುಖಂಡರಾದ ಬೆಗ್ಲಿಸೂರ್ಯಪ್ರಕಾಶ್, ಜಿ.ಪಂ. ಸದಸ್ಯ ಅರುಣ್ ಪ್ರಸಾದ್, ತಾ.ಪಂ.ಮಾಜಿ ಅಧ್ಯಕ್ಷ ಸೋಲೂರು ಅಂಜನಪ್ಪ,,ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿಚಲಪತಿ, ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಪ್ರವೀಣ್ ಗೌಡ, ಮಂಜುನಾಥ್,ಮು.ರಾಘುವೇಂದ್ರ ಸೌಭಾಗ್ಯಮ್ಮ, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜಣ್ಣ, ನರಸಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ್ ಬಾಬು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ನಗರ ಅದ್ಯಕ್ಷ ತಿಮ್ಮರಾಯಪ್ಪ, ನಗರ ಪ್ರಧಾನ ಕಾರ್ಯದರ್ಶಿ ಓಹಿಲೇಶ್, ಯುವಮೋರ್ಚ ಅಧ್ಯಕ್ಷ ಬಾಲಾಜಿ, ಗಾಂಧಿನಗರ ವೆಂಕಟೇಶ್. ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು,