ಹುಲಿಗೆಮ್ಮ ದೇವಿ ಸೇವಾ ಟ್ರಸ್ಟ್ ಗೆಗಾಜಣ್ಣ ಮರು ಆಯ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.20: ಇಲ್ಲಿನ ಕೊಳಗಲ್ಲು ರಸ್ತೆಯ ಇಂದಿರಾ ನಗರದ ಶ್ರೀ ಹುಲಿಗೆಮ್ಮ ದೇವಿ ಸೇವಾ ಟ್ರಸ್ಟ್ ಗೆ 2023 ರಿಂದ 2028 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ.
ಇಂದು ಬೆಳಿಗ್ಗೆ ನಡೆದ ಟ್ರಸ್ಟ್ ನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದು ಈ ಹಿಂದಿನ ಅಧ್ಯಕ್ಷ ಕೆ.ಗಾಜಣ್ಣ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
 ಉಪಾಧ್ಯಕ್ಷರಾಗಿ ಬಿ.ಶೇಖಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ರಾಮಾಂಜಿನೇಯಲು, ಖಜಾಂಚಿಯಾಗಿ ಡಿ.ಮೋಹನ್ ದಾಸ್ ಇವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ನ ಮುಖಂಡರುಗಳಾದ ಬಿ.ಕೆ.ಅನಂತಕುಮಾರ್, ಎಲ್.ಮಾರೆಣ್ಣ, ಈ. ರಾಮಪ್ಪ,  ಕೆ.ವೀರಬಸಪ್ಪ, ಹೆಚ್.ತಿಪ್ಪೆಸ್ವಾಮಿ ಟ್ರಸ್ಟ್ ನ ಇನ್ನಿತರ ಸದಸ್ಯರು, ಹೆಚ್.ಸಿದ್ದೇಶ್, ಹೆಚ್.ಹುಸೇನಪ್ಪ, ವೆಂಕಟೇಶ್ ಮೂರ್ತಿ, ಮಹೇಶ್  ಮೊದಲಾದವರು ಇದ್ದರು ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಬಿ.ರಾಮಾಂಜಿನೇಯಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.