ಹುಲಿಗೆಮ್ಮ ದೇವಿಯ ಮಹಾದ್ವಾರ ಉದ್ಘಾಟನೆ

ಸಿರವಾರ,ಆ.೩೦- ಪಟ್ಟಣದಲ್ಲಿರುವ ಶ್ರೀ ಹುಲಿಗೆಮ್ಮ ದೇವಸ್ಥಾನದ ಮಹಾದ್ವಾರವನ್ನು ಭಕ್ತಾದಿಗಳು ಅತ್ಯಂತ ಅದ್ಧೂರಿಯಾಗಿ ಉದ್ಘಾಟಿಸಿದರು.
ಉದ್ಘಾಟನೆ ಗೂ ಮೊದಲು ಪಿಡಬ್ಲ್ಯೂಡಿ ಕ್ಯಾಂಪಿನಿಂದ ಸುಮಾರು ೨೨೫ ಕ್ಕೂ ಅಧಿಕ ಕುಂಭ -ಕಳಸ ಹೊತ್ತ ಮಹಿಳೆಯರು, ಸಕಲ ವಾದ್ಯಮೇಳಗಳೊಂದಿಗೆ ಗೋಪುರದ ಕಳಸದ ಮೆರವಣಿಗೆ ನಡೆಯಿತು. ನೂತನವಾಗಿ ನಿರ್ಮಿಸಿರುವ ಗೋಪುರಕ್ಕೆ ಕಳಸವನ್ನು ಪ್ರತಿಷ್ಠಾಪಿಸಲಾಯಿತು.
ಈ ವೇಳೆ ದೇವಸ್ಥಾನದ ಪೂಜಾರಿ, ಪಟ್ಟಣದ ವಿವಿಧ ಪಕ್ಷಗಳ ನೇತಾರರು, ಪಟ್ಟಣದ ಹಿರಿಯ ಮುಖಂಡರು, ಪಟ್ಟಣ ಪಂಚಾಯತಿ ಸದಸ್ಯರು, ವಿವಿಧ ಯುವಕ ಸಂಘಗಳ ಪದಾಧಿಕಾರಿಗಳು, ಯುವಕರು, ಸೇರಿದಂತೆ ನೂರಾರು ಮಹಿಳೆಯರು, ಮಕ್ಕಳು ಭಾಗವಹಿಸಿ, ಸಂಭ್ರಮಿಸಿದರು.