ಹುಲಿಗೆಮ್ಮಾದೇವಿ ತೊಟ್ಟಿಲೋತ್ಸವ

ಹುಬ್ಬಳ್ಳಿ,ಏ20: ನಗರದ ಶ್ರೀ ಹುಲಿಗೆಮ್ಮಾದೇವಿಯವರ ಜನ್ಮದಿನದ ಪ್ರಯುಕ್ತ ಶ್ರೀ ಹುಲಿಗೆಮ್ಮಾ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು.
ಬ್ರಾಹ್ಮೀಮುಹೂರ್ತದಲ್ಲಿ ಮಹಾಭೀಷೇಕ, ವಿಶೇಷ ಪುಷ್ಪಾಲಂಕಾರ, ಉದಯಪೂಜೆ ಇತ್ಯಾದಿ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಸಕಲ ಪುಷ್ಪಗಳಿಂದ ಅಲಂಕರಿಸಿದ ತೊಟ್ಟಿಲಿನಲ್ಲಿ ದೇವಿಯವರ ಉತ್ಸವಮೂರ್ತಿಯನ್ನೀರಿಸಿ ಪರಮ ಪೂಜ್ಯನೀಯ ಮಾತೋಶ್ರೀ ಅಮ್ಮನವರ ದಿವ್ಯಸಾನಿಧ್ಯದಲ್ಲಿ ಮುತ್ತೈದೆಯರುಗಳಿಂದ ಲಲಿತ ಸಹಸ್ರ ನಾಮಾವಳಿ ಪಠಣೆ, ತೊಟ್ಟಿಲೋತ್ಸವ, ನಾಮಕರಣ ಮಹಾಮಂಗಳಾರತಿ ನೆರವೇರಿದವು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ.ಪೂ. ಮಾತೋಶ್ರೀ ಅಮ್ಮನವರು, ಎಮ್.ಎಸ್. ಆಯ್.ಎಲ್. ಸದಸ್ಯ ತೋಟಪ್ಪಾ ನಿಡಗುಂದಿ, ಮಾಜಿ ಸೈನಿಕ, ಸುರೇಶ ನಿಡಗುಂದಿ, ನಾಗೇಶ ಕತ್ರಿಮಲ್, ವಿರುಪಾಕ್ಷೀ ಚಲವಾದಿ, ಪ್ರಕಾಶ ಅರಗಂಜಿ, ಗುರು ಬನ್ನಿಕೊಪ್ಪ, ಶ್ರೀಧರ ನಿಡಗುಂದಿ, ದಿನೇಶ ನಿಡಗುಂದಿ, ಪ್ರವೀಣ ರಾಯಬಾಗಿ, ಪ್ರವೀಣ ಶೇಠ, ಸುಭಾಷ ಗೊಂದಿ, ಶ್ರೀನಿವಾಸ ಬಾರಕೇರ, ವಿಜಯ ಬಳ್ಳಾರಿ, ಸುರೇಶ ಬಾಕಳೆ, ಶಾರದಮ್ಮ ಕಸ್ತೂರಿ, ವಸುಂದರಾಬಾಯಿ ಸೋಳಂಕಿ, ಪದ್ಮಶ್ರೀ ನಿಡಗುಂದಿ, ಸುಲೋಚನಾ ಶೇರಖಾನಿ, ನಾಗರತ್ನಾ ಹೆಬ್ಬಳ್ಳಿ, ಯೋಗಿಣಿ ಶೇಲ್ಲಿಕೇರಿ, ಜೋತಿ ಕಾಮಕರ, ಗೀತಾ ಬದ್ದಿ, ಲತಾ ಬಾರಕೇರ, ರೇಖಾ ಸುಳ್ಳದ, ಲಕ್ಷ್ಮೀ ಬಾರಕೇರ, ನಂದಾ ಕಾಮಕರ, ಲಲಿತಾ ಹೆಬ್ಬಳ್ಳಿ, ವಿದ್ಯಾ ದಾಗಿನದಾರ, ಸಂಜನಾ ಗಾಂವಕರÀ, ದೇವಸ್ಥಾನದ ಪ್ರಧಾನ ಅರ್ಚಕರಾದ ರವಿಕುಮಾರ ಮಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.