ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 16 :- ತಾಲೂಕಿನ ಹುಲಿಕೆರೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ 2003 ನೇ ಬ್ಯಾಚ್ ನ ಹಳೇ ಕೆ,ಎಂ,ಕಾರ್ತೀಕ್ ,ವಿಕಾಸ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತಸಿದರು
ಹುಲಿಕೆರೆ ಗ್ರಾಮದ ಮುಖಂಡ ಎಚ್,ಪಿ,ಕರಿಬಸಪ್ಪ ಮಾತನಾಡಿ ಪ್ರತಿಯೊಂದು ಗ್ರಾಮದಲ್ಲಿ ಇರುವ ಸರಕಾರಿ ಶಾಲೆಗಳನ್ನು ಬೆಳೆಸುವ ಹಾಗೂ ಪೋಷಿಸುವ ಕಾರ್ಯ ಆಗಬೇಕಿದೆ ಇದಕ್ಕೆ ಸಾಕ್ಷಿ ಎಂಬಂತೆ ಅದೇ ಶಾಲೆಗಳಲ್ಲಿ ಓದಿದ 2003ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ನೀಡಿ ಶಾಲೆಯ ಅಭಿವೃದ್ಧಿ ಗೆ ಕೈ ಜೋಡಿಸುವ ಕೆಲಸ ಮಾಡಿದರೆ ಶಾಲೆಯ ಅಭಿವೃದ್ಧಿ ಸಾದ್ಯ ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅದ್ಯಕ್ಷ ಕುಮಾರ್, ಬಿ, ಸದಸ್ಯ ನಾಗರಾಜ್, ಗ್ರಾಮದ ಮುಖಂಡರಾದ ಅಜ್ಜಪ್ಪ, ಶಿವು, ಹಳೆಯ ವಿದ್ಯಾರ್ಥಿಗಳಾದ, ಎಚ್,ಬಿ, ವಿನೋದ ಕುಮಾರ್ ಅಂಜಿನಿ, ವಿರೇಶ್, ನಾಗೇಶ್, ಶ್ರೀನಿವಾಸ್, ಹಾಗೂ ಶಾಲಾ ಶಿಕ್ಷಕರು ಸೇರಿದಂತೆ ಇತರರಿದ್ದರು.
One attachment • Scanned by Gmail