ಹುಲಿಕುಂಟಿ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಒಳತಿರುವು ರಸ್ತೆಗೆ ಆಗ್ರಹ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 17:   ರಾಷ್ಟ್ರೀಯ ಹೆದ್ದಾರಿಯಿಂದ 73-ಹುಲಿಕುಂಟಿ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಒಳತಿರುವು ಮಾಡುವ ಮೂಲಕ 20ಕಿ.ಲೋ ಮೀಟರ್ ದೂರ ಕಡಿಮೆ ಮಾಡಬೇಕು ಇಲ್ಲವಾದಲ್ಲಿ ರಸ್ತೆ ದಾಟಲು ಬಹು ಕಷ್ಟವಾಗಿದ್ದು, ಹುಡುಗರು ವಯಸ್ಸಾದವರು ದಾಟಲು ಹೋಗಿ ಅಪಘಾತಗಳು ಸಂಭವಿಸಿ ಸಾವುಗಳು ಹೆಚ್ಚುತ್ತಿದ್ದು ತಕ್ಷಣ ಒಳತಿರುವು ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ 73- ಹುಲಿಕುಂಟಿ ಗ್ರಾಮದ ಜನರ ಸಮಸ್ಯೆ ಬಗೆಹರಿಸಿ ಎಂದು ಎ.ಕೆ. ಮರಿಸ್ವಾಮಿ ಒತ್ತಾಯಿಸಿದರು.
ಅವರು ತಾಲೂಕಿನ 73-ಹುಲಿಕುಂಟಿ ಗ್ರಾಮಸ್ಥರು ಸೇರಿ ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಮಾತನಾಡಿ ತಿರುವು ರಸ್ತೆ ನಿರ್ಮಾಣ( ಒಳತಿರುವು-ಯು.ಟರ್ನ) ಮಾಡುವುದರಿಂದ ಗ್ರಾಮಕ್ಕೆ ಹತ್ತಿರವಾಗುತ್ತದೆ, ಇದಕ್ಕೆ ಹತ್ತಿರ ಇರುವ ಬಹಳಷ್ಟು ಗ್ರಾಮಗಳಿಗೆ ಅನುಕೂಲವಾಗುತ್ತದೆ, ಅಪಘಾತಗಳು ತಪ್ಪುತ್ತವೆ, ರಸ್ತೆ ನಿರ್ಮಾಣ ಪ್ರಾರಂಭವಾದಾಗಿನಿಂದಲೂ ಸಹ ಯು.ಟರ್ನ್ ಒಳತಿರುವು ಮಾಡಿ ಎಂದು ಒತ್ತಾಯ ಮಾಡುತ್ತಿದ್ದು ಯಾರು ಸಹ ಕ್ರಮ ವಹಿಸದೇ ಇರುವುದು ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಿದೆ. ಪ್ರಮುಖವಾಗಿ ಕೂಡ್ಲಿಗಿ ಮತ್ತು ಹೊಸಪೇಟೆಗೆ ಹೋಗಲು ಇದೇ ರಸ್ತೆಗೆ ಬರಬೇಕು ಶಿವಪುರ ಗ್ರಾಮದಿಂದ 3 ಕಿ.ಲೋ ಮೀಟರ ಇರುವ ಗ್ರಾಮಕ್ಕೆ ಮಾಡಿದ್ದಾರೆ ಅದರೆ ಸಂಪರ್ಕಕ್ಕೆ ದೂರವಾಗುವ ಅಂದರೆ 20 ಕಿ.ಲೋ ಮೀಟರ್ ಸುತ್ತಿ ಬರುವಂತಾಗುತ್ತದೆ ಈ ತಿರುವು ರಸ್ತೆ ಇಲ್ಲದೇ ಹೋದಲ್ಲಿ, ಈಗಾಗಲೇ ಅಸ್ಪತ್ರೆಗೆ ಹೋಗುವವರು, ಶಾಲಾ ಕಾಲೇಜುಗಳಿಗೆ ಹೋಗುವರಿಗೆ, ಬೈಕ್‍ನಲ್ಲಿ ಪ್ರಯಾಣ ಮಾಡುವವರಿಗೆ ತುರ್ತು ಗರ್ಭಿಣಿ ಸ್ತ್ರೀಯರನ್ನು ಕರೆದುಕೊಂಡು ಹೋಗಲು ಕಷ್ಟವಾಗುತ್ತಿದೆ ಕಾರಣ ಸಂಡೂರು ತಾಲೂಕಿನ ಗಡಿಗ್ರಾಮವಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೇವೆ, ದಿನಾಂಕ 22.11.2028 ರಂದು ಗ್ರಾಮ ಪಂಚಾಯಿತಿ ನಿಡುಗುರ್ತಿ ಇವರಿಗೆ ಮನವಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕರಿಗೆ, ಲೋಕೋಪಯೋಗಿ ಇಲಾಖೆಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸಪೇಟೆ ಇವರಿಗೆ, ಮಾನ್ಯ ಜಿಲ್ಲಾಧಿಕಾರಿಗಳಿಗೆ  ಹಾಗೂ ಕಾಮಗಾರಿ ಮಾಡುವ ಪ್ರಾಜೆಕ್ಟ್ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಗುತ್ತಿಗೆ ದಾರ ಕಂಪನಿ ಎಲ್.ಅಂಡ್.ಟಿ. ಯವರಿಗೆ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ, ಅದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಬಹಿಷ್ಕಾರವನ್ನು ಮಾಡಲು ಇಡೀ ಗ್ರಾಮಸ್ಥರು ನಿರ್ಧರಿಸಿದ್ದೇವೆ, ಅಲ್ಲದೆ ಅಲ್ಲಿಯೂ ಈಡೇರದಿದ್ದರೆ ಇದ್ದಲಿ ಇನ್ನೂ ಉಗ್ರಹೋರಾಟವನ್ನು ಮಾಡುತ್ತೇವೆ ಎಂದು ಅದಕ್ಕಾಗಿ ಮಾನ್ಯ ತಹಶೀಲ್ದಾರರು ಪೂರ್ಣ ಪ್ರಮಾಣದಲ್ಲಿ ಚುನಾವಣೆಯ ಒಳಗಾಗಿಯೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವೆಂಕಟೇಶ್, ಜಿ. ಗಾದ್ರೇಪ್ಪ, ಪರಮೇಶ್, ಭರ್ಮಪ್ಪ.ಬಿ. ಬಿ.ಮಂಜುನಾ, , ಚಿನ್ನಾಪ್ರಪ್ಪ, ಹನುಮಂತಪ್ಪ, ಅಂಜಿನಪ್ಪ, ಬಸವರಾಜ, ತಿಪ್ಪಣ್ಣ, ಗೌರಪ್ಪ, ರವಿ, ತಿಪ್ಪಣ್ಣ, ಅಂಜಿನಪ್ಪ ದುರುಗಪ್ಪ.ಹೆಚ್. ಇತರ ಹಲವಾರು ಗ್ರಾಮಸ್ಥರು ಸೇರಿ ಮನವಿ ಪತ್ರ ಸಲ್ಲಿಸಿದರು.