
ಬಸವಕಲ್ಯಾಣ:ಎ.29: ಗುರುವಾರ ಮಧ್ಯಾಹ್ನ ಗುಡುಗು ಮಿಂಚಿನಿಂದ ಬಿದ್ದ ಮಳೆಯ ಮಧ್ಯದಲ್ಲಿ ಸಿಡಿಲು ಬಡಿತದಿಂದ ಹುಲಸೂರ ತಾಲೂಕಿನಲ್ಲಿ ಸುಮಾರು 6 ಜಾನುವಾರುಗಳು ಸಾವನಪ್ಪಿವೆ.
ಶುಕ್ರವಾರ ಬೆಳಿಗ್ಗೆ ವರೆಗೆ ಬಿದ್ದ ಆಲಿಕಲ್ಲು ಮಳೆ ಬಿರುಗಾಳಿಯಿಂದ ಅನೇಕ ಮರಗಳು ನೆಲಕ್ಕುರುಳಿವೆ ಭಾರಿ ಮಳೆಯಿಂದ ಶಂಕರ ಮಾಧರಾವ ಬಡ ರೈತನ 1 ಎಕರೆ ಉಳ್ಳಾಗಡ್ಡೆ ನೀರಿನಲ್ಲಿ ಮುಳುಗಿದರೆ ಹುಲಸೂರಿನ ಬಾಬುರಾವ ಖುರೇಷಿ ಎಮ್ಮೆ, ಮೀರಖಲ ಗ್ರಾಮದ ನವನಾಥ ಶಿಂದೆ ಅವರ ಹಸು, ಮೇಹಕರ ಗ್ರಾಮದಲ್ಲಿ 1 ಮೇಕೆ, ಹಲಸಿತುಗಾಂವನಲ್ಲಿ 2 ಎತ್ತು, ಅಳವಾಯಿ ಗ್ರಾಮದಲ್ಲಿ 1 ಎಮ್ಮೆ ಬಲಿಯಾಗಿದ್ದು ರೈತರು ಸಂಕಟಕ್ಕೆ ಸಿಲುಕಿದ್ದಾರೆ.
ತಾಲೂಕು ಆಡಳಿತ ಸಂಕಷ್ಟಕ್ಕಿಡಾದ ರೈತರ ಮನೆಗೆ ಭೇಟಿ ನೀಡಿ ಆದ ಹಾನಿಯನ್ನು ಅಂದಾಜಿಸಬೇಕಾಗಿದೆ ಇದೇ ರೀತಿ ಜಿಲ್ಲೆಯಾದ್ಯಂತ ಮಳೆಯಾದರೆ, ಹುಲಸೂರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ರೈತರ ಹೊಲಗಳಿಗೆ ಆದ ಹಾನಿ ಸಹ ಸಮೀಕ್ಷೆ ಮಾಡಿ ವರದಿ ನೀಡಬೇಕಾಗಿದೆ ಎಂದು ಜನರ ಅನಿಸಿಕೆಯಾಗಿದೆ.