ಹುಲಸೂರ ತಾಪಂ ಮಹಾದೇವ ಜಮ್ಮು ಪ್ರಭಾರಿ ಇಒ

ಹುಲಸೂರ:ನ.7: ತಾಲ್ಲೂಕು ಪಂಚಾಯತ್‍ನ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ (ಇಒ)ಯಾಗಿ ಮಹಾದೇವ ಜಮ್ಮು ಅವರು ಸೋಮವಾರ ಅಧಿಕಾರವಹಿಸಿಕೊಂಡರು.
ಈ ಮುಂಚೆ ತಾಪಂನಲ್ಲಿ ಇಒ ಆಗಿದ್ದ ಖಾಲಿದ್ ಅಲಿ ಅವರು ಇತ್ತೀಚೆಗೆ ಅ.30ರಂದು ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಹುಲಸೂರ ತಾಪಂನಲ್ಲಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಾದೇವ ಜೆ. ಅವರಿಗೆ ಇಒ ಹುದ್ದೆಯ ಪ್ರಭಾರವನ್ನು ನೀಡಲಾಗಿದೆ.
ಕಿಟ್ಟಾ ಗ್ರಾಮ ಮೂಲದವರಾದ ಮಹಾದೇವ ಅವರು ಹುಮನಾಬಾದ್ ತಾಲ್ಲೂಕು ಪಂಚಾಯತ್ ವ್ಯಾಪ್ತಿಯ ಘೋಡವಾಡಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ತಾಪಂ ಯೋಜನಾಧಿಕಾರಿ ಜಯಪ್ರಕಾಶ ಚವ್ಹಾಣ ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.