
ಹುಲಸೂರ:ಆ.7: ತಾಲ್ಲೂಕಿನ ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ-ಕಾಲೇಜು, ಅಂಗನವಾಡಿ ಕಟ್ಟಡಗಳು, ಕುಡಿಯುವ ನೀರಿನ ವ್ಯವಸ್ಥೆ, ಆಟದ ಮೈದಾನದ ಅಗತ್ಯ, ಹಾಸ್ಟೆಲ್‍ಗಳ ಸುಧಾರಣೆಗೆ ಏನು ಬೇಕು, ಎಲ್ಲೆಲ್ಲಿ ರಸ್ತೆಗಳು ಹಾಳಾಗಿವೆಯೋ ಅವುಗಳನ್ನು ಸರಿಪಡಿಸಲು ಪ್ರಸ್ತಾವ ಸಲ್ಲಿಸಬೇಕು.
ಈ ಕೆಲಸ ಶೀಘ್ರವಾಗಿ ಮಾಡಿದರೆ ಎಲ್ಲ ಕಾಮಗಾರಿಗಳನ್ನು ಬೇಗ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದ ಸುಮಾರು 17 ಮನೆಗಳ ಗೋಡೆ ಕುಸಿದಿದ್ದು ತಕ್ಷಣ ಗ್ರಾಮಲೆಕ್ಕಾಧಿಕಾರಿ, ಎಂಜಿನಿಯರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟುಎರಡು ದಿನಗಳಲ್ಲಿ ವರದಿ ಸಲ್ಲಿಸಬೇಕು. ಬಳಿಕ ಕೆಟಗೆರಿ ‘ಸಿ’ ಇರುವವರಿಗೆ ?50 ಸಾವಿರ ಹಾಗೂ ಸಂಪೂರ್ಣ ಮನೆ ಕುಸಿತಗೊಂಡಲ್ಲಿ ?3 ರಿಂದ ?5 ಲಕ್ಷ ಪರಿಹಾರವನ್ನು ನೇರವಾಗಿ ಫಲಾನುಭವಿ ಖಾತೆಗೆ ಜಮೆ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಂದಾಯ ಗ್ರಾಮ ರಚನೆ, ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಪರಿಶೀಲನೆ, ನೈಸರ್ಗಿಕ ವಿಕೋಪ ಪ್ರಗತಿ ಪರಿಶೀಲನೆ, ಒತ್ತುವರಿ ಭೂ ಸ್ವಾಧೀನ, ಅಕ್ರಮ ಮರಳು ಸಾಗಣೆ, ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ, ಕಾಡು ಪ್ರಾಣಿಗಳಿಂದ ಬೆಳೆ ಹಾನಿ , ತೊಗರಿ ನೇಟೆರೋಗ ಭಾದಿತ ಪರಿಹಾರ ನಿಧಿ, 108 ಆಂಬುಲೆನ್ಸ್ ಸೇವೆ, ಕೊಂಗಳಿ ಏತ ನೀರಾವರಿ ಯೋಜನೆ ವಿಳಂಬ ಹಾಗೂ ಪಟ್ಟಣ ಪಂಚಾಯಿತ ಸೇರಿ ಇತರೆ ವಿಷಯಗಳ ಕುರಿತು ಇಲಾಖಾವಾರು ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಮಾತನಾಡಿ ‘ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಹಲವರು ತಮ್ಮ ಪ್ರಾಣ ಕಳೆದಿಕೊಂಡಿದ್ದಾರೆ. ಅಪಘಾತದಲ್ಲಿ ಸಾವಿನ ಬಗ್ಗೆ ವಿಶ್ಲೇಷಣೆ ಮಾಡಿದಾಗ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಇಲ್ಲದರಿಂದ, ಕಾರು ಚಾಲಕರು ಸೀಟ್ ಬೆಲ್ಟ್ ಇಲ್ಲದೇ ಡ್ರೈವಿಂಗ್ ಮಾಡಿರುವುದರಿಂದ ಮೃತಪಟ್ಟಿದ್ದಾರೆ’ ಎಂದರು.
ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿ ಅವರೊಂದಿಗೆ ಸಮಾಲೊಚನೆ ನಡೆಸಿ ಹೆಲ್ಮಟೆ ಇಲ್ಲದೇ ವಾಹನ ಚಾಲನೆ ಮಾಡುವವರಿಗೆ ಮಾಡುವವರಿಗೆ ದಂಡ ಹಾಕುವ ಬದಲು ಹೆಲ್ಮಟ್ ಕೊಡಿಸುವ ವ್ಯವಸ್ಥೆ ಮಾಡುವ ನಿರ್ಣಯ ಮಾಡಲಾಗಿದೆ. ಸಿ.ಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಅಪಘಾತಗಳ ವಿಡಿಯೊಗಳನ್ನೇ ಬಳಸಿಕೊಂಡು ನಮ್ಮ ಸ್ಥಳೀಯ ಭಾಷೆಯಲ್ಲಿಯೇ ಜನರ ಮನಸ್ಸಿಗೆ ಮುಟ್ಟುವಂತೆ ತಮ್ಮ ಕಾರ್ಟುನ್ ಚಿತ್ರದ ಮೂಲಕ ಪರಿವರ್ತನೆಯಾಗುವಂತೆ ತಿಳಿಸುತ್ತಿದ್ದೇವೆ . ಯಾರಾದರೂ ತಾಲ್ಲೂಕಿನ ದಾನಿಗಳು 9 ಸಿ.ಸಿ.ಕ್ಯಾಮೆರಾ ಅಳವಡಿಸಲು ಮುಂದೆ ಬರಬೇಕಾಗಿದೆ ಎಂದು ಕೋರಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರಾದ ದಯಾನಂದ ನಿಮಾಣೆ, ಲೋಕೇಶ ಧಬಾಲೆ, ಗುಲಾಮ್ ಬಡಾಯಿ,ದತ್ತಾ ಮೋರೆ ಅವರೂ ಕುರಿತು ಮನವಿ ನೀಡಿದರು.
ತಹಶೀಲ್ದಾರ್ ಶಿವಾನಂದ ಮೆಹ್ತ್ರೇ, ತಾ.ಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ (ಪಂಚಾಯಿತಿರಾಜ್) ಮಹದೇವ ಜಮ್ಮು, ಆಡಳಿತ ವೈದ್ಯಧಿಕಾರಿ ಶಶಿಕಾಂತ ಕನ್ನಡೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೀಪ ಬಿರಾದಾರ, ಪಿಎಸ್‍ಐ ನಾಗೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.