ಹುಲಸೂರ ಗ್ರಾಪಂ ಸಿಬ್ಬಂದಿಗಳ ನಿರ್ಲಕ್ಷತನದಿಂದಾಗಿ ಪಟ್ಟಣದ ಮೋಹಲ್ಲಾ ಬಡಾವಣೆಯಲ್ಲಿನ ನಿವಾಸಿಗಳ ಅಳಲು

ಬಸವಕಲ್ಯಾಣ:ಫೆ.16: ಹುಲಸೂರ ಪಟ್ಟಣದ ವಾರ್ಡ ಐದರಲ್ಲಿ ಬರುವ ಮೌಲಾಲಿ ಮೋಹಲ್ಲಾ (ಗಲ್ಲಿ)ಯ ಮುಖ್ಯ ರಸ್ತೆಯಿಂದ ಬಡಾವಣೆಯ ಒಳಗಡೆ ಹೋಗಲು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ವರ್ಷಗಳಿಂದ ಹಲವು ಸರತಿ ಮೌಲಾಲಿ ಮೋಹಲ್ಲಾದ ರಸ್ತೆ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಪಿಡಿಓ, ಗ್ರಾಮ ಪಂಚಾಯತ ಸದಸ್ಯರ ಗಮನಕ್ಕೆ ತಂದರು ಅವರು ಸಹ ಇದಕ್ಕು ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುವದು ಸಾರ್ವಜನಿಕರಿಗೆ ಬೇಸರ ತರಿಸಿದೆ.
ಕಳೆದ ವರ್ಷ ಬೇರೆ ಕಾಮಗಾರಿ ಮಾಡುವ ಸಮಯದಲ್ಲಿ ಪೈಪಲೈನ್ ಒಡೆದು ಅದರ ದುರಸ್ತಿ ಮಾಡುವ ನೆಪ ಹೇಳಿ ಒಳ್ಳೆಯ ಡೆಸ್ಕ್ ಸ್ಲ್ಯಾಬ್ ಇರುವ ಚರಂಡಿ ರಸ್ತೆ ಅಗೆದು ಹಾಕಿದರು. ನಂತರ ಅದು ಹೋಸದಾಗಿ ಮಾಡಿ ಕೋಡುವುದಾಗಿ ಗ್ರಾಮ ಪಂಚಾಯತಿ ಅÀವರು ಹೇಳಿದರು. ಆದರೆ ಎರಡು ವರ್ಷ ಕಳೆದರು ಈ ಕಡೆ ಗಮನ ಹರಿಸದ ಗ್ರಾಮ ಪಂಚಾಯತಿ ಅÀವರು, ಈ ವಿಷಯದ ಬಗ್ಗೆ ಬಡಾವಣೆಯ ಜನರು ಹಲವು ಬಾರಿ ಗ್ರಾಮ ಪಂಚಾಯತ್ ಸದಸ್ಯರ ಹಾಗು ಮುಖಂಡರ ಗಮನಕ್ಕೆ ತಂದರು ಚಕಾರ ಎತ್ತದ ಗ್ರಾಮ ಪಂಚಾಯತಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ರಸ್ತೆಯಿಂದ ಸಾಗಬೇಕಾದರೆ ರಸ್ತೆಯುದ್ದಕ್ಕು ಚರಂಡಿಯ ನೀರು ದಾಟಿ ಸಾಗಬೇಕು, ಇದರಿಂದ ವಯಸ್ಕರು ಕಾಲುಜಾರಿ ಇದರಲ್ಲಿ ಬಿದ್ದಿರುವ ಘಟನೆಗಳು ಸಂಭವಿಸಿವೆ ಅಲ್ಲದೆ ರಸ್ತೆಯಲ್ಲಿ ನಿಂತ ನೀರಿನಿಂದಾಗಿ ಸೋಳ್ಳೆಗಳ ಕಾಟ ಹೆಚ್ಚಾಗಿದೆ ಇದರಿಂದ ಕಾಲರಾ ,ಮಲೇರಿಯಾ ಅಲ್ಲದೆ ಬೇರೆ ರೋಗ ರುಜುನಿಗಳು ಬರಲಾರಂಭಿಸಿವೆ ಎಂದು ಕಾಲೋನಿಯ ನಿವಾಸಿ ಶೌಕತ ಅವರು ತಿಳಿಸಿದ್ದಾರೆ.

ಇಗಲಾದರು ಹುಲಸೂರ ಗ್ರಾಮ ಪಂಚಾಯತಿ ಅÀವರು ಈ ಕಡೆ ಗಮನ ಹರಿಸಿ ಸಾರ್ವಜನಿಕರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು ಎಂದು ಬಡಾವಣೆಯ ನಿವಾಸಿಗಳಾದ ಇಸುಬ ಸಿಲಾರ, ಸಾಬೇರಾ ಸಾಕುರ, ರಿಯಾಸತ್ ಬಿ, ಮುನ್ನಾ ಬಿ, ಖಾಜಾ ಬಿ, ಇಸ್ಮಾಯಿಲ್ ಮೈನೂಸಾಬ್, ಸಾಹೀದಾ ಬಿ ಅವರು ಆಗೃಹಿಸಿದ್ದಾರೆ.

ಹುಲಸೂರ ಪಟ್ಟಣದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದೆ, ಅಲ್ಲದೆ ನಿತ್ಯ ಮನೆಗಳಿಗೆ ಬರಬೇಕಾದ ಸ್ವಚ್ಚತಾ ವಾಹನದ ಪ್ರತಿ ದಿನ ಬಾರದೇ ವಾರಕೋಮ್ಮೆ ಆಗಮಿಸುತ್ತಿರುವುದರಿಂದ ಎಲ್ಲೆಂದರಲ್ಲಿ ಕಸದ ರಾಸಿ ಕಂಡು ಬರುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ವಾರ್ಡ ನಂಬರ ಎರಡರಲ್ಲಿ ಬರುವ ಧಬಾಲೆ ಗಲ್ಲಿಯಲ್ಲಿರುವ ಸಾರ್ವಜನಿಕ ಬೋರವೇಲ್ ಹತ್ತಿರ ಪ್ರತಿ ದಿನ ವಯಸ್ಕರರು ಹಾಗು ಶಾಲಾ ಮಕ್ಕಳಿಗೆ ರಸ್ತೆ ದಾಟಲು ಬಾರದದ ಹಾಗೆ ರಸ್ತೆ ಮೇಲೆ ನೀರು ನಿಂತಿ ಗಬ್ಬುನಾರುತ್ತಿದೆ ಆದರೆ ಇಲ್ಲಿಯ ವರೆಗೆ ಯಾರು ಈ ಈ ಕಡೆ ಗಮನ ಹರಿಸದೇ ಇರುವುದಿಂದ ಸಮಸ್ಯೆಗಳ ಮೇಲೆ ಸಮಸ್ಯೆ ಉಂಟಾಗುತ್ತಿದ್ದರು ಕುಡಾ ಗ್ರಾಪಂ ಏನು ಕೆಸಲ ಮಾಡುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರಲಾರಂಭಿಸಿವೆ. ಈ ತರಹದ ಗ್ರಾಮ ಪಂಚಾಯತಿ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಯುವ ಮುಖಂಡ ಲೊಕೇಶ ಧಬಾಲೆ ತಮ್ಮ ಅಳಲು ತೋಡಿಕೊಂಡಿದಾರೆ.