ಹುಲಸೂರ: ಕೋರೋನಾ ವಾರಿಯರ್ಸ್‍ಗೆ ಸಚಿವರಿಂದ ಸನ್ಮಾನ

ಬೀದರ:ಜೂ.1: ಹುಲಸೂರ ತಾಲೂಕಿನ ಕೋರೊನಾ ವಾರಿಯರ್ಸ್ ಗಳಿಗೆ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಹುಲಸೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆತ್ಮೀಯ ಸನ್ಮಾನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಇಳಿಮುಖವಾಗುತ್ತಿವೆ. ಆರೋಗ್ಯ, ಪೆÇಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮಂಚೂಣಿಯಲ್ಲಿ ಕೆಲಸ ಮಾಡಿದ್ದರಿಂದ ಇಂದು ಸೋಂಕು ಹರಡುವಿಕೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಫ್ರಂಟಲೈನ್ ವರ್ಕಸ್ರ್ಗಗಳನ್ನು ಸನ್ಮಾನಿಸಿ ಅವರು ಮತ್ತಷ್ಟು ಉತ್ತಮ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರೇರಣೆ ನೀಡಲು ತಾವು ಸನ್ಮಾನ ಮಾಡುತ್ತಿರುವುದಾಗಿ ತಿಳಿಸಿದರು.
ಈ ಕೋವಿಡ್ ಮಹಾಮಾರಿಯ ವಿರುದ್ದ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‍ಗಳಾದ ವೈದ್ಯಾಧಿಕಾರಿಗಳು, ನರ್ಸಗಳು, ಲ್ಯಾಬ್ ಟೆಕ್ನಿಶಿಯನ್, ???ಂಬುಲೆನ್ಸ್ ಚಾಲಕರು, ಸ್ವ್ಯಾಬ್ ಪರೀಕ್ಷೆ ತಜ್ಞ ಸಿಬ್ಬಂದಿ, ಸುರಕ್ಷತಾ ಸಿಬ್ಬಂದಿ, ಹಾಗೂ ಪೆÇೀಲಿಸ್ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ ಇತರರಿಗೆ ಸಚಿವರು ವೈಯಕ್ತಿಕವಾಗಿ ಶಾಲು ಹೊದಿಸಿ, ಹೂಗುಚ್ಚ ನೀಡಿ, ಸಿಹಿ ನೀಡುವುದರ ಮೂಲಕ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶರಣು ಸಲಗರ್, ತಹಶೀಲ್ದಾರ ಶಿವಾನಂದ ಮೇತ್ರೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಷ್ಣುಕಾಂತ ಪಾಟೀಲ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಹ್ಮದ್ ಆರಿಫೆÇೀದ್ದಿನ್, ಡಿವೈಎಸ್ಪಿ ಸೋಮಲಿಂಗ ಕುಂಬಾರ, ಮುಖಂಡರಾದ ಅನೀಲ ಭುಸಾರೆ, ಸುಧೀರ್ ಕಾಡಾದಿ, ಸೂರ್ಯಕಾಂತ ಚಿಲ್ಲಾಬಟ್ಟೆ, ಶ್ರೀಮತಿ ಲತಾ ಹಾರಕುಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.