ಹುಲಗಿಯಲ್ಲಿ ಮೇಲ್ಸೇತುವೆ ಸಮಸ್ಯೆ   ಜಟಾಪಟಿ: ಗಣಪನ ಮೇಲಿನ ಸಿಟ್ಟು ಇಲಿಯಪ್ಪ ಗೆ  ?     


ರುದ್ರಪ್ಪ ಭಂಡಾರಿ.                                    
ಕೊಪ್ಪಳ, ಮಾ.07:  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಸೋಮವಾರ ಸಾವ ೯ಜನಿಕರ ತರಾಟೆಗೆ ಒಳಗಾದ ಪ್ರಸಂಗ ಎದುರಾಯಿತು. ಐತಿಹಾಸಿಕ ದೇಗುಲ ಸ್ಥಳವಾದ ಹುಲಿಗಿ ಗ್ರಾಮದ ಜನರು ಹಾಗೂ ನಿತ್ಯ ಸಾವಿರಾರು ಭಕ್ತಾದಿ ಗಳು ಎದುರಿಸುತ್ತಿರುವ ಮೆಲ್ಸುತುವೆ ಕಾಮಗಾರಿ ನಿಮಿ೯ಸುವ ಬೇಡಿಕೆ ಈಡೇರದೇ ರಾಜಕೀಯ ಮುಖಂಡರು ಬರೀ ಆಶ್ವಾಸನೆ ಕೊಡುತ್ತಾ ಪಾರಾಗುತ್ತಿದ್ದರು. ಇದನ್ನು ಸಹಿಸಿಕೊಂಡಿದ್ದ ನೂರಾರು ಜನರು ಸೋಮವಾರ ಹುಲಿಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿ ಆನಂದ್ ಸಿಂಗ್, ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ,ಸಂಸದ ಕರಡಿ ಸಂಗಣ್ಣ, ಕೊಪ್ಪಳ ಶಾಸಕ ರಾಘು ಹಿಟ್ನಾಳ ಸಮ್ಮುಖ ದಲ್ಲ ಆನಂದ್ ಸಿಂಗ್ ರನ್ನು ತರಾಟೆಗೆ ತೆಗೆದುಕೊಂಡರು.  ಈ ಸಮಸ್ಯೆ ಬಗ್ಗೆ  ಹತ್ತಾರು ಜನ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ , ಸಂಸದ, ಶಾಸಕರಿಗೆ ಕಳೆದ ಹತ್ತಾರು ವರ್ಷಗಳಿಂದ ಮನವಿ ಸಲ್ಲಿಸಿದರು ಯಾರೂ ಕ್ಯಾರೇ ಅನ್ನಲಿಲ್ಲ.ಅನ್ನುತ್ತಿಲ್ಲ. ಆದರೆ ಕಳೆದ ವಾರ ಹೊಸಪೇಟೆ ಯ ಅನಂತ ಶಯನ  ಗುಡಿ ಬಳಿ ಆನಂದ್ ಸಿಂಗ್ ಮೇಲ್ಸೇತುವೆ ಗೆ ಚಾಲನೆ ನೀಡಿದ್ದಾರೆ. ಆದರೆ ಹುಲಿಗಿ ನಿಲ೯ಕ್ಷಿಸಿದ್ದ ನ್ನೂ  ಸಹ ಜನರ ಸಹನೆಯ ಕಟ್ಟೆ ಒಡೆಯಲು ಕಾರಣ.  ಕೆಲಸಮಯ ಸಚಿವ ಆನಂದ್ ಸಿಂಗ್ ಹಾಗೂ ಸಾವ೯ಜನಿಕ ಜಟಾಪಟಿ ನಡೆದಿರುವುದು ಸೋಶಿಯಲ್ ಮೀಡಿಯಾ ದಲ್ಲಿಯೂ ವೈರಲ್ ಆಗಿದೆ  ಇದುವರೆಗೆ ಸ್ಥಳೀಯ ಜನಪ್ರತಿನಿಧಿ ಗಳು ಮಾಡದ ಕಾಯ೯ವೈಖರಿ ಆಕ್ರೋಶ ವಾನ್ನು ಏಕಾಏಕಿ ಆನಂದ್ ಸಿಂಗ್ ಅವರ ಮೇಲೆ ಹೇರಿದ್ದು ಎಸ್ಟು ಸಮಂಜಸ ? ಎಂದು ಪ್ರಜ್ಞಾವಂತರ ಪ್ರಶ್ನೆ. ಜಟಾಪಟಿ ನೋಡುತ್ತಾ ನಿಂತಿದ್ದ ಸಚಿವ ಹಾಲಪ್ಪ  ಅಥವಾ ಸಂಸದ ಕರಡಿ ಯವರಾಗಳಿ ಆನಂದ್ ಸಿಂಗ್ ಪರ ನಿಲ್ಲದಿರುವುದು ಮತ್ತು ಭರವಸೆ ಕೊಡದೆ ಮೂಕ ಪ್ರೇಕ್ಷಕ ರಂತೆ ನಿಂತಿದ್ದು, ಗಣಪನ ಮೇಲಿನ ಸಿಟ್ಟು ಇಳಿಯಪ್ಪ ಗೆ ಬಿತ್ತು ಎಂಬಂತೆ ಭಾಸ ವಾಗಿತ್ತು.. ಆದ್ರೂ ಕೊನೆಗೆ ಆನಂದ್ ಸಿಂಗ್ ಮಾತ್ರ ನೆಲಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮೆಲ್ಸುತುವೆ ನಿಮಿ೯ಸುವ ಭರವಸೆ ನೀಡಿ ಆಯ್ಕೆ ಆಗಿದ್ದವ ರನ್ನು ಗಂಟು ಬಿದ್ದು ಕೆಲಸ ಮಾಡಿಸಿಕೊಳ್ಳಿ  ಅಂತಾ  ಸಿನಿ ಶೈಲಿ ಯಲ್ಲಿ ಹೇಳಿ ಕಾರನ್ನೆರಬೇಕಾಯಿತು. ಈ ಪ್ರಸಂಗ ಸಾವ೯ಜನಿಕರು ಕುತೂಹಲದಿಂದ ಆಲಿಸಿದ್ದಂತು ಸತ್ಯ.  ಚುನಾವಣೆ ಸಮೀಪ ಬಂದಂತೆ ರಾಜಕೀಯ ವಲಯದಲ್ಲಿ ಹೊಸ ಹೊಸ ಸನ್ನಿವೇಶ ಸೃಷ್ಟಿ ಗೆ ಕಾರಣ ಎನ್ನಲು ಇದೂ ಒಂದು ತಾಜಾ ನಿದಶ೯ನ