ಹುರುಳಿಹಾಳ್ :ನರೇಗಾ ಕೂಲಿ ಕಾರ್ಮಿಕ ಸಾವು

ಕೂಡ್ಲಿಗಿ.ಏ. 26:- ನರೇಗಾ ಕೂಲಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬನಿಗೆ ಕಾಣಿಸಿಕೊಂಡ ಎದೆನೋವಿನಿಂದ ಇಂದು ಬೆಳಿಗ್ಗೆ ತಾಲೂಕಿನ ಹುರುಳಿಹಾಳ್ ಗ್ರಾಮದ ಕೇದಿಗೆದಿಬ್ಬ ಹಳ್ಳದಲ್ಲಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಹುರುಳಿಹಾಳ್ ಚಂದ್ರಪ್ಪ (36) ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ಸಾವನ್ನಪ್ಪಿರುವ ನರೇಗಾ ಕೂಲಿ ಕಾರ್ಮಿಕನಾಗಿದ್ದಾನೆ ಈತನು ಬೆಳಿಗ್ಗೆ ಕೆಲಸ ಮಾಡುತ್ತಿರುವಾಗ್ಗೆ ಎದೆನೋವು ಕಾಣಿಸಿದ್ದು ಪಕ್ಕಕ್ಕೆ ಬಂದು ಕುಳಿತಾಗ ನಂತರ ಸಮೀಪದ ಚಿಕ್ಕಜೋಗಿಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿ ಬದುಕಿಲ್ಲ ಎಂದು ತಿಳಿದಿದೆ ಘಟನಾ ಸ್ಥಳಕ್ಕೆ ಹುರುಳಿಹಾಳ್ ಪಿಡಿಓ ಕವಿತಾ ಕಾರ್ಯದರ್ಶಿ ಹನುಮಂತಪ್ಪ ಬೇಟಿ ನೀಡಿ ಪರಿಶೀಲಿಸಿದ್ದಾರೆಂದು ತಿಳಿದಿದೆ.