ಹುಮ್ಮಸ್ಸಿನಿಂದ ಮೊದಲ ಬಾರಿ ಮತದಾನ ಮಾಡಿದ ಯುವ ಮತದಾರರು

ಔರಾದ:ಮೇ.11:ಮೊದಲ ಮತದಾರರನ್ನು ಪೆÇ್ರೀತ್ಸಾಹಿಸುವ ಚುನಾವಣಾ ಆಯೋಗದ ಉತ್ತೇಜನ ಕ್ರಮಗಳಿಗೆ ಪ್ರತಿಕ್ರಿಯೆಯೋ ಎಂಬಂತೆ, ಹೊಸ ಮತದಾರರು ಈ ಸಲದ ಚುನಾವಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಮತಗಟ್ಟೆಗಳಲ್ಲಿ ಕಾಣಿಸಿಕೊಂಡರು.

ಮತದಾನ ಆರಂಭವಾದ ಮುಂಜಾನೆ 7 ಗಂಟೆಯಿಂದಲೇ ಹಲವು ಮೊದಲ ಸಲದ ಮತದಾರರು ಸಾಲಿನಲ್ಲಿ ನಿಂತ ಸಂತೋಷಿ ನವಾಡೆ ಹಾಗೂ ರೇವಣಸಿದ್ದ ನವಾಡೆ ಇಬ್ಬರು ಅಕ್ಕ ತಮ್ಮ ಮೋದಲ ಸಲ ಮತ ಚಲಾಯಿಸಿದರು. ನಂತರ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಅವರು. ”ಮತದಾನ ನಮ್ಮ ಹಕ್ಕು, ಸೂಕ್ತ ಅಭ್ಯರ್ಥಿಗೆ ಮತ ನೀಡೋಣ. ಎಲ್ಲರೂ ಮತ ಹಾಕೋಣ” ಎಂಬ ಸಂದೇಶ ಪ್ರತಿಪಾದಿಸಿದರು. ಮಸಿ ಹಾಕಿದ ಬೆರಳನ್ನು ಪ್ರದರ್ಶಿಸಿಕೊಂಡು ಸೆಲ್ಫಿ ಕ್ಲಿಕ್ಕಿಸುತ್ತಿದ್ದುದು ಹಾಗೂ ಇತರರೊಂದಿಗೆ ಹಂಚಿಕೊಂಡುದು ಕಂಡುಬಂತು.