ಹುಮ್ನಾಬಾದ್-ಚಿಟಗುಪ್ಪ ಎಪಿಎಂಸಿಗೆ ಅಧಿಕಾರಿಗಳ ಭೇಟಿ

ಹುಮನಾಬಾದ:ಆ.6: ಸ್ಥಳೀಯ ಎಪಿಎಂಸಿ ಅಧಿಕಾರಿಗಳ ವಿರುದ್ಧ ವಿವಿಧ ದೂರು, ಆರೋಪಗಳ ಹಿನ್ನೆಲೆಯಲ್ಲಿ ಬುಧವಾರ ಹೆಚ್ಚುವರಿ ನಿರ್ದೇಶಕ ಆದೆಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಹುಮನಾಬಾದ ಮತ್ತು ಚಿಟಗುಪ್ಪ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಕೆಲ ತಿಂಗಳ ಹಿಂದೆ ಎಪಿಎಂಸಿ ಸಮಿತಿ ವತಿಯಿಂದ ಸುಮಾರು 30ಕ್ಕೂ ಅಧಿಕ ಲೀಸ್ ಕಮ್ ಸೇಲ್, ಸೇಲ್ -ಡೀಡ್ ನೋಂದಣೆ ಇಲಾಖೆಯಲ್ಲಿ ನೋಂದಣೆ ಮಾಡಲಾಗಿದ್ದು, ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಖಾಸಗಿ ವ್ಯಕ್ತಿಗಳು ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲಿಸಿದರು.

ಚಿಟಗುಪ್ಪ ಪಟ್ಟಣದ ಎಪಿಎಂಸಿ ಪ್ರಾಂಗಣಕ್ಕೆ ಭೇಟಿ ನೀಡಿ ವಿವಿಧ ಅಂಗಡಿಗಳಿಗೆ ಕಾರ್ಯ ಕುರಿತು ಪರಿಶೀಲನೆ ನಡೆಸಿದರು. ಲೀಸ್ ಕಮ್ ಸೇಲ್, ಸೇಲ್ ಡೀಡ್ ಮಾಡುವಲ್ಲಿ ಕಚೇರಿಯ ಕಾರ್ಯದರ್ಶಿಗಳು ನಿಯಮಗಳು ಪಾಲಿಸಿಲ್ಲ ಎಂದು ಹೇಳಲಾಗುತ್ತಿದ್ದು, ಈ ಕುರಿತು ಅಧಿಕಾರಿಗಳ ತಂಡ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ವರದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ನಿರ್ದೇಶಕ ಆದೆಪ್ಪ, ದೂರುಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳ ಪರಿಶೀಲನೆ ನಡೆಸಿದ್ದು, ಇದೀಗ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಪೂರ್ಣ ತನಿಖೆ ನಡೆಸಿದ ನಂತರ ಹೆಚ್ಚಿನ ವಿವರ ನೀಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಅನಿಲಕುಮಾರ ಹಾದಿಮನಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.