ಹುಮನಾಬಾದ್, ರಟಕಲ್ ಬಸ್ ಸಂಚಾರಕ್ಕೆ ಶಾಸಕ ಪಾಟೀಲ್ ಚಾಲನೆ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಆ.8: ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ಹುಮನಾಬಾದ್ ಪಟ್ಟಣದಿಂದ ಸುಕ್ಷೇತ್ರ ರೇವ ರಟಕಲ್ ದೇವಾಲಯಕ್ಕೆ ತೆರಳು ಬಸ್ ಸಂಚಾರಕ್ಕೆ ಶಾಸಕ ಡಾ. ಸಿದ್ದು ಪಾಟೀಲ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಭಕ್ತಾದಿಗಳ ಬಹುದಿನಗಳ ಬೇಡಿಕೆಯಾಗಿದ್ದ. ಇಂದು ಅಧಿಕೃತವಾಗಿ ಚಾಲನೆ ನೀಡಿಲಾಗಿದೆ. ದಿನ ನಿತ್ಯ ಹುಮನಾಬಾದ್ ಪಟ್ಟಣದಿಂದ ವಾಯಾ ಚಿಟಗುಪ್ಪಾ ಮಾರ್ಗವಾಗಿ ರಟಕಲ್ ತಲುಪಲಿದ್ದು, ಭಕ್ತಾದಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ವಿನಂತಿಸಿದ್ದರು.
ವಿಭಾಗೀಯ ನಿಯಂತ್ರಣ ಅಧಿಕಾರಿ ವಿಠಲ ಖದಮ್, ಮಾತನಾಡಿ. ಪಟ್ಟಣದ ನಿಲ್ದಾಣದಿಂದ ರಟಕಲ್ ಗ ನಿತ್ಯ
ಬೆಳಿಗ್ಗೆ 7.30. ಮಧ್ಯಾಹ್ನ 12 ಹಾಗೂ ಸಂಜೆ 5 ಹೇಗ್ ಮೂರು ಬಾರಿ ಮಾರ್ಗವಾಗಿ ತರಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣ ಅಧಿಕಾರಿ ವಿಠಲ ಖದಮ್, ಪಕ್ಷದ ತುಂಬಾ, ಮುಖಂಡರಾದ ಗೀರಿಶ
ಮಲ್ಲಿಕಾರ್ಜುನ ಸಿಗಿ, ಗೋಪಾಲಕೃಷ್ಣ ಮೋಹಳೆ, ನಾಗಭೂಷಣ ಸಂಗಮ್, ಗೀರಿಶ ಪಾಟೀಲ ಮತ್ತು ಕಾರ್ಯಕರ್ತರು, ಭಕ್ತಾದಿಗಳು ಉಪಸ್ಥಿತರಿದ್ದರು.