ಹುಮನಾಬಾದ್ :ಅ.10: ಮಾಜಿ ಸಚಿವ ರಾಜಶೇಖರ ಪಾಟೀಲ್ ಅಪಾರ ಕೊಡುಗೆ ನೀಡಿದ್ದಾರೆ. ಮಾಜಿ ಸಚಿವ ರಾಜಶೇಖರ ಪಾಟೀಲ್ ವಿರುದ್ಧ ಶಾಸಕ ಡಾ. ಸಿದ್ದು ಪಾಟೀಲ್ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸೂಕ್ತವಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಪ್ಸರಮಿಯ ಹೇಳಿದರು.
ಪಟ್ಟಣದ ಕಾಂಗ್ರೆಸ್ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ನೀಡುತ್ತಿರುವ ಹೇಳಿಕೆ. ಶುದ್ಧ ಸುಳ್ಳು, ಹುಮನಾಬಾದ್ ನಲ್ಲಿ ಮನೆ ಒಡೆಯುವ ಕಾರ್ಯ ಕೇಂದ್ರ ಸಚಿವ ಭಗವಂತ ಖೂಬಾ ಮಾಡಿದ್ದಾರೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ವಿರುದ್ಧ ಕಿಡಿಕಾರಿದರು.
ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಓಂಕಾರ್ ತುಂಬಾ ಮಾತನಾಡಿದರು ಸುಳ್ಳು ಆರೋಪಗಳು ಮಾಡುವುದು ಸರಿ ಅಲ್ಲ ಎಂದ ಅವರು, ಗಡವಂತಿ ಗ್ರಾಮದಲ್ಲಿ ಪಂಚಾಯತ ಅಧ್ಯಕ್ಷರುಹಾಗೂ ಅಧಿಕಾರಿಗಳ ಮೂಲಕ ಜೆಜೆಎಂ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಮಾಜಿ ಶಾಸಕ ರಾಜಶೇಖರ ಪಾಟೀಲರು ಭಾಗವಹಿಸಿಲ್ಲ ಎಂದ ಅವರು, ಪೂಜೆ ಮಾಡಿರುವ ಕಾಮಗಾರಿಗೆ ಮತ್ತೊಮ್ಮೆ ಒತ್ತಾಯದ ಮೂಲಕ ಪೂಜೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ನಾವು ಸಾಥ್ ನೀಡುತ್ತೇವೆ. ಹೊಸ ಹೊಸ ಯೋಜನೆಗಳು ತಂದು ಕ್ಷೇತ್ರದಲ್ಲಿ ಕೆಲಸ ಮಾಡಲ್ಲಿ ಬದಲಿಗೆ ಹಳೆ ಕಾಮಗಾರಿಗೆ ಮತ್ತೊಮ್ಮೆ ಚಾಲನೆ ನೀಡುವುದು ಬೇಡ ಎಂದರು.
ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಜಮಗಿ, ಜಿಪಂ, ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ತಾಪಂ ಮಾಜಿ ಸದಸ್ಯ ಬಾಬು ಟೈಗರ್, ತಾಪಂ ಮಾಜಿ ಸದಸ್ಯ ಶ್ರಮಂತ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ಮಹೇಂದ್ರಕ, ಮಲ್ಲಿಕಾರ್ಜುನ ಶರ್ಮಾ, ಅಶೋಕ ಸೊಂಡೆ, ವೀರಪ್ಪ ಧುಮ್ಮನಸೂರ ಇದ್ದರು.
…………………………………………………
ಹುಮನಾಬಾದ್ ತಾಲೂಕು ಬರಗಾಲ
ಘೋಷಣೆಯಲ್ಲಿ ಶಾಸಕ ಡಾ. ಸಿದ್ದ ಪಾಟೀಲ್ ಸರ್ಕಾರದ ಮೇಲೆ ಒತ್ತಡ ಹೇರುವುದರಲ್ಲಿ
ವಿಫಲ ಎಂದು
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಪ್ಸರಮಿಯ