ಹುಮನಾಬಾದ್ ನ ಕೈಗಾರಿಕೆ ಪ್ರದೇಶದಲ್ಲಿ ಅಗ್ನಿ ಅನಾಹುತ ಇಬ್ಬರಿಗೆ ಗಂಭೀರ ಗಾಯ

ಹುಮನಾಬಾದ್:ಎ.9: ಇಲ್ಲಿಯ ಕೈಗಾರಿಕಾ ಪ್ರದೇಶದಲ್ಲಿನ ಹಿಮಾಲಯ ಸ್ಟೀಲ್ ಇಂಡಸ್ಟ್ರಿ ಅಡಿ ನಡೆಯುವ ಟೈರ್ ಆಯಿಲ್ ಉತ್ಪಾದನಾ ಘಟಕದಲ್ಲಿ ಶನಿವಾರ ಸಂಜೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಇಬ್ಬರು – ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಂಪನಿ ನೌಕರರಾದ ಸುನೀಲ ಮತ್ತು ಸಚಿನ್, ಬಚ್ಚಾರಾಮ್ ಎಂದು ತಿಳಿದುಬಂದಿದೆ. ಸುಟ್ಟು ಕರಕಲಾದ ಇಬ್ಬರ
ದೇಹ ನೋಡಲಾಗದ ಸ್ಥಿತಿಗೆ ತಲುಪಿದ್ದವು. ಇಬ್ಬರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಲ್ಲುರ್ಗಿಗೆ ಕಳಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಆಗಮಿಸಿ ಬೆಂಕಿ ನಂದಿಸಿತು. ವಿಷಯ ತಿಳಿದ ಸಿಪಿಐ ಶರಣಬಸವ ಕೋಡ್ಲಾ, ಪಿಎಸ್‍ಐ ಮಂಜನಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.