ಹುಮನಾಬಾದ್ ನಲ್ಲಿ 8ರಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಬೃಹತ್ ಪ್ರತಿಭಟನೆ

ಹುಮನಾಬಾದ್:ಸೆ.5: ಮಂಡಲ ವತಿಯಿಂದ ದಿನಾಂಕ 8-9-2023 ರಂದು ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ಎಲ್ಲಾ ಮಂಡಲಗಳಲ್ಲಿ ನಡೆಯಲಿದ್ದು, ಈ ಕುರಿತು ಹುಮನಾಬಾದ್ ಮಂಡಲದ ಪೂರ್ವಭಾವಿ ಸಭೆ ಜರುಗಿತು. ತದನಂತರ ಸಭೆಯಲ್ಲಿ ಪ್ರತಿಭಟನೆಗಾಗಿ ಪ್ರತಿ ಶಕ್ತಿ ಕೇಂದ್ರದಿಂದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತಿಳಿಸುವಂತೆ ಸೂಚಿಸಲಾಯಿತು ಹಾಗೂ ಚಂದ್ರಯಾನ 3 ಅಭಿಯಾನ ಯಶಸ್ವಿ ಕುರಿತು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು,
ಈ ಸಂಧರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು ಕುಶಾಲ್ ಪಾಟೀಲ್ ಗಾದಗಿ, ಭಾರತೀಯ ಜನತಾ ಪಕ್ಷದ ಬೀದರ್ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಮಂಠಾಳಕರ್, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಸಂಜುಕುಮಾರ್ ಪಾಟೀಲ್ ಜ್ಯಾಂತೀ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹರಕಂಚಿ,ಹುಮನಾಬಾದ್ ಮಂಡಲ ರೈತ ಮೋರ್ಚಾ ಅಧ್ಯಕ್ಷರಾದ ರಾಮರಾವ್ ಕೆರೂರೆ ಹಾಗೂ ಹುಮನಾಬಾದ್ ಮಂಡಲ ಪ್ರಧಾನ ಕಾರ್ಯದರ್ಶಿ ರಾಜು ಭಂಡಾರಿ , ರೈತ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ವಡ್ಡನಕೆರೆ,ಶ್ರೀಶೈಲ ರತ್ಕಲ್ , ದಯಾನಂದ್ ಮಾನಕೆರೆ, ಶರಣು ಇಂಡಿ, ಬಸ್ವರಜ್ ಕಣಜಿ,ಸತೀಶ್ ಪಾಟೀಲ್ ರಾಜೇಶ್ವರ,ಕೈಲಾಶ್ ಮಂಗಲಗಿ, ಇತರೆ ಹುಮನಾಬಾದ್ ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.