ಹುಮನಾಬಾದ್ ನಲ್ಲಿ ಶಾಸಕ ಸಿದ್ದು ಪಾಟೀಲ್ ಸವಾಲ್

ಹುಮನಾಬಾದ್:ಡಿ.11: ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಅವರು ರಾಜಕೀಯ ಭಾಷಣ ಮಾಡುವುದ ಕ್ಕೆ ದಿನಾಂಕ ಮತ್ತು ವೇದಿಕೆ ಸ್ಥಳ ತಿಳಿಸಿದರೆ ನಾನೇ ಬರುತ್ತೆನೆ ‘ ಎಂದು ಶಾಸಕ ಡಾ. ಸಿದ್ದು ಪಾಟೀಲ್

ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ನಾಯಕರು ಕಂಗಾಲು ಆಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇರುವ ಹಿನ್ನಲೆ ತಾಲೂಕಿನ ಅಧಿಕಾರಿಗಳನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳುವ ಯತ್ನ ಮಾಡಲಾಗುತ್ತಿದೆ ಎಂದು ದೂರಿದರು.

ನ.22ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿನ ರಾಜಕೀಯವನ್ನು ಭೀಮರಾವ್ ಪಾಟೀಲ ಅವರು ಈಚೆಗೆ ನಡೆದ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಎಳೆದಿದ್ದಾರೆ. ವಿದ್ಯಾರ್ಥಿಗಳು ಇರುವ ಕಾರಣ ನಾನು ರಾಜಕೀಯ ಭಾಷಣ ಮಾಡುವುದಕ್ಕೆ ಹೋಗಲಿಲ. ಒಂದು ವೇದಿಕೆ ಮಾಡಿ ಎಂದಿದ್ದೆ. ಅಧಿವೇಶನ ಮುಗಿದ ನಂತರ ವಿಧಾನ ಪರಿಷತ್ ಸದಸ್ಯರು ಯಾವ ದಿನ ಎಂದು ತಿಳಿಸಿದರೆ ನಾನು ಆ ವೇದಿಕೆಗೆ ಬರಲು ಸಿದ್ಧನಿದ್ದೇನೆ’ ಎಂದರು.

ಪೆÇ್ರಟೋಕಾಲ್ ಪಾಲನೆ: ಈ ಹಿಂದೆ ಆಡಳಿತ ನಡೆಸಿದ ಶಾಸಕರು ಎಷ್ಟು ಕಾಠ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ
ಮಾಡಿದ್ದಾರೆ. ಪ್ರವಾಸಿ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಯಾವ ಪೆÇ್ರಟೋಕಾಲ್ ಇತ್ತು. ಆಗ ಪ್ರಶ್ನೆಮಾಡದ ವಿಧಾನ ಪರಿಷತ್ ಸದಸ್ಯರು ಇದೀಗ ಪದೇಪದೇ ಅಧಿಕಾರಿಗಳನ್ನು ಪೆÇ್ರಟೋಕಾಲ್ ವಿಷಯದಲ್ಲಿ ಮಾತನಾಡುತ್ತಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದಾರೆ. ನಾನೂ ಈಶ್ವರ ಖಂಡ್ರೆ ಜತೆಗೆ ಮಾತನಾಡಿದ್ದು, ಬರ ಎದುರಾಗಿದ್ದು, ಜೆಜೆಎಂ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಜನರಿಗೆ ನೀರು ಕೊಡಿಸುವ ಕೆಲಸ ಆಗಬೇಕಿದೆ. ಪೆÇ್ರಟೋಕಾಲ್ ಹೆಸರಲ್ಲಿ ಕಾಲಹರಣ ಮಾಡುವುದು ಬೇಡ ಎಂದು ಮನವರಿಕೆ ಮಾಡಿದ್ದೇನೆ ಆರುಪಿಸಿದರು.

ಹಕ್ಕಿಗೆ ಧಕ್ಕೆ ತಂದಿರುವ ಬಸವಕಲ್ಯಾಣ ಸಹಾಯಕ ಆಯುಕ್ತರು ಹಾಗೂ ಹುಮನಾಬಾದ ತಾಪಂ ಇಒ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ದಸರಾ ಸಂದರ್ಭದಲ್ಲಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಬಂಗಾರದ ಕಿರೀಟ ಧರಿಸಲಾಗಿತ್ತು. ಭಕ್ತರಿಂದ ಸಂಗ್ರಹವಾದ ಬಂಗಾರದಿಂದ ಕಿರೀಟ ಮಾಡಿಸಲಾಗಿದೆ ಎಂಬುದು ಗೊತ್ತಾಗಿದ್ದು, ಮಾಜಿ ಶಾಸಕರಿಂದ ಕಿರೀಟ ಧಾರಣೆ ಮಾಡಿರುವುದು ಎಷ್ಟು ಸರಿ? . ಮಾಜಿ ಶಾಸಕರು ವೈಯಕ್ತಿಕವಾಗಿ ಕೆ.ಜಿ ಬಂಗಾರದ ಕಿರೀಟ ದೇಣಿಗೆ ನೀಡಿದರೆ ದೇವಸ್ಥಾನದಲ್ಲಿ ಅದರ ಪಾವತಿಗಳು ಏಕೆ ಇಲ್ಲ?. ಸಹಾಯಕ ಆಯುಕ್ತರು ತಪ್ಪು ಮಾಹಿತಿ ನೀಡಿದ್ದರಿಂದ ಹಕ್ಕುಚ್ಯುತಿ ಉಂಟಾಗಿದೆ. ಅಲ್ಲದೆ ಕೆಡಿಪಿ ಸಭೆಯಲ್ಲಿ ತಾಪಂ ಪ್ರಭಾರ ಇಒ ಶಾಸಕರ ಹಕ್ಕಿಗೆ ಧಕ್ಕೆ ತಂದ ಕಾರಣಕ್ಕೆ ಅವರ ವಿರುದ್ಧವೂ ಹಕ್ಕುಚ್ಯುತಿಗೆ ಸಲ್ಲಿಸಲಾಗಿದೆ. ಅಧಿಕಾರಿಗಳು ಸರ್ಕಾರದ ನಿಯಮಾನುಸಾರ ಕೆಲಸ ಮಾಡಬೇಕು. ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳ ಯುವ ಉದ್ಯಮಿ ಸಂತೋಷ ಪಾಟೀಲ್,???? ಪಸಾರ್ಗಿ, ಮುಖಂಡರಾದ ಮಲ್ಲಿಕಾರ್ಜುನ್ ಸೀಗಿ, ಗಿರೀಶ ತುಂಬಾ, ವೀರೇಶ ಸಜ್ಜನ್, ನಾಗಭೂಷಣ ಸಂಗಮ, ಮಧುಕರ ಹಿಲಾಲಪೂರ, ಇದ್ದರು.