ಹುಮನಾಬಾದ್ ನಲ್ಲಿ ಕಮಲ ಅರಳುವುದು ಖಚಿತ:ಸಿಎಂ ಬೊಮ್ಮಾಯಿ

ಹುಮನಾಬಾದ್: 2023ನೇ ಸಾರ್ವತ್ರೀಕ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬಿಸಿದ್ದು, ಹುಮನಾಬಾದ್ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ.ಸಿದ್ದು ಪಾಟೀಲ ಅವರು ಸುಮಾರು 25 ಸಾವಿರ ಅತ್ಯಾಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ತೇರು ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಗುರುವಾರ ನಡೆದ ಬಿಜೆಪಿ ಅಭ್ಯರ್ಥಿ ಡಾ.ಸಿದ್ದು ಪಾಟೀಲ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಹುಮನಾಬಾದ್ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯಿಂದ ಕಾಂಗ್ರೆಸ್ ಪಕ್ಷ ತನ್ನ ಅಡಳಿತ ಮಾಡುತ್ತಾ ಬಂದಿದೆ. ಕ್ಷೇತ್ರದ ಜನರು ಅವರ ಮೇಲೆ ಇಟ್ಟ ನಿರೀಕ್ಷೆ ಮತ್ತು ಭರವಸೆಗಳು ಸಂಪುರ್ಣವಾಗಿ ಹುಸಿಯಾಗಿವೆ. ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ದಿ ಯಾಗಿಲ್ಲಾ, ನಮ್ಮ ಹುಡಗ ಡಾ.ಸಿದ್ದು ಪಾಟೀಲಗೆ ಒಂದು ಬಾರಿ ಅವಕಾಶ ಮಾಡಿ ಕೋಡಿ ಸಂಪುರ್ಣ ಅಭಿವೃದ್ದಿ ಮಾಡಿತೋರಿಸುತ್ತಾನೆ, ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಬಂದ ಮೇಲೆ ರೈತರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಕುಲಿಕಾರ್ಮಿಕರರ ಪರವಾದಂತಹ ಯೋಜನೆಗಳನ್ನು ಜಾರಿಗೆ ತಂದಿದೆ, ಕಾಂಗ್ರೆಸ್ ಸರ್ಕಾರದ ಅಡಳಿತಾವಧಿಯಲ್ಲಿ ರೈತರ, ಕುಲಿಕಾರ್ಮಿಕ, ಅಲ್ಪಸಂಖ್ಯಾತರ, ದಲಿತರ ಬಾಳಿಗೆ ಬೆಳಕಾಗದೆ. ಮತ ಬ್ಯಾಂಕಾಗಿ ಬಳಸಿಕೊಂಡು ಅನ್ಯಾಯ ಮಾಡಿದೆ. ಒಂದು ವರ್ಗಕ್ಕೆ ಅನುದಾನ ಕೊಟ್ಟು ಮಿಕ್ಕ ಸಮಾಜಕ್ಕೆ ದೂರ ಇಟ್ಟು ಒಬ್ಬರಿಗೆ ಒಂದು ನ್ಯಾಯ ಇನ್ನೂಬ್ಬರಿಗೆ ಒಂದು ನ್ಯಾಯ ಕೊಟ್ಟು ದೀನ ದಲಿತರನ್ನು ಮತ ಬ್ಯಾಂಕಾಗಿ ಬಳಸಿಕೊಂಡಿದೆ ಎಂದರು.

ಸಬ್ಬಕಾ ಸಾಥ ಸಬ್ಬಕಾ ವಿಕಾಸ ಎಂಬಂತೆ, ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯನ್ನು ಭಾರತೀಯ ಜನತಾ ಪಕ್ಷ ಒದಗಿಸಿದೆ. ನಾನು ಮುಖ್ಯಮಂತ್ರಿಯಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಬೇಡಿಕೆ ಸ್ಪಂಧಿಸಿ ಅಂತರಿಕ ಮೀಸಲಾಯಿತಿ ನೀಡಿ ತುಳಕ್ಕೆ ಒಳಗಾದ ಜನರ ನೇರವಿಗೆ ಬಂದಿದ್ದೇನೆ. ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಮಾಜದಲ್ಲಿ ಸಾಮರಸ್ಯ ಇರಬೇಕಾದರೆ ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು ಎಂದರು.

ಕ್ಷೇತ್ರದ ಕಾಂಗ್ರೆಸ್‍ಗೆ ಸಿಂಹ ಸ್ವಪ್ನವಾಗಿರುವ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಡಾ.ಸಿದ್ದಲಿಂಗಪ್ಪಾ ಪಾಟೀಲ ಅವರ ಪರ ಜನರ ಪ್ರೀತಿ, ವಿಶ್ವಾಸ ಇದ್ದು, ಜಗತ್ತಿನ ಯಾವ ಶಕ್ತಿಯೂ ಕೂಡ ಡಾ.ಸಿದ್ದು ಪಾಟೀಲ ಗೆಲುವು ತಡೆಯಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.

ಬಿಜೆಪಿ ಅಭ್ಯರ್ಥಿ ಡಾ.ಸಿದ್ದು ಪಾಟೀಲ ಅವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಣ್ಣ ಕಾರ್ಯಕರ್ತನಾಗಿ ಕ್ಷೇತ್ರದ ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ಕಳೆದ 20 ವರ್ಷಗಳ ರಾಜಕೀಯ ಇತಿಹಾಸದಲ್ಲಿ ದೊಡ್ಡ ಸ್ಥಾನದಲ್ಲಿ ಬಂದಿಲ್ಲ, ಸಣ್ಣ ಕಾರ್ಯಕರ್ತನಾದ ನನಗೆ ಭಾರತೀಯ ಜನತಾ ಪಾರ್ಟಿ ಮನ್ನಣೆ ನೀಡಿ ಇಂದು ಟಿಕೆಟ್ ನೀಡಿದ್ದಾರೆ. ಪಕ್ಷ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಿಮ್ಮೇಲರ ಆಶೀರ್ವಾದಿಂದ ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧ್ಯಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಬಿಎಸ್‍ಎಸ್‍ಕೆ ಅಧ್ಯಕ್ಷ ಸುಭಾಷ ಕಲ್ಲೂರು, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ಮಂಡಲ ಅಧ್ಯಕ್ಷ ಪ್ರಭಾಕರ್ ನಾಗರಾಳೆ, ಪ್ರಮುಖರಾದ ಸೋಮನಾಥ ಪಾಟೀಲ, ಗಜೇಂದ್ರ ಕನಕಟಕರ್, ಪದ್ಮಾಕರ ಪಾಟೀಲ, ಬಸವರಾಜ ಆರ್ಯ, ವಿಶ್ವನಾಥ ಪಾಟೀಲ ಮಾಡಗೋಳ, ಸಂತೋಷ ಪಾಟೀಲ, ರಾಜು ಭಂಡಾರಿ, ನಾರಾಯಣ ರಾಂಪುರೆ, ರವಿ ಹೋಸಳ್ಳಿ, ಶ್ರೀನಾಥ ದೇವಣಿ, ನಾಗಭೋಷಣ ಸಂಗಮ, ರಮೇಶ ಕಲ್ಲೂರು, ಜ್ಞಾನದೇವ ಧುಮಾಳೆ, ಇದ್ದರು.