ಹುಮನಾಬಾದ್ ತಾಲೂಕ ಆಡಳಿತ ಕಚೇರಿಗೆ ಸಚಿವ ಕೃಷ್ಣಬೈರೇಗೌಡ ದಿಢೀರ್ ಭೇಟಿ

ಹುಮನಾಬಾದ್ :ಆ.25:ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ಇಲ್ಲದೆ ಜನರಿಗೆ ಸೇವೆ ಹಾಗೂ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಸಮಾಜದಲ್ಲಿ ಉತ್ತಮ ಸೇವೆ ಹಾಗೂ ಆಡಳಿತ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯ ಉಪ ನೋಂದಣಿ, ದಾಖಲೆ ಮತ್ತು ಪಹಣಿ ವಿಭಾಗಗಳಿಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದ.

ಸಂದರ್ಭದಲ್ಲಿ ಹಳೆ ದಾಖಲೆಗಳು ನೋಡಿದ ಅವರು, ನಿಯಮ ಅನುಸಾರ ಸಾರ್ವಜನಿಕರ ದಾಖಲೆಗಳು ಇರಿಸಬೇಕು. ದಾಖಲೆಗಳ ಸಂಗ್ರಹ ಕೋಣೆ ಹಳೆ ವಸ್ತುಗಳು ಇರಿಸುವ ಕೋಣೆ ಆಗಬಾರದು. ರಾಜ್ಯದ ಎಲ್ಲಾ ಕಡೆಗಳಲ್ಲಿನ ದಾಖಲೆಗಳ ಕೋಣೆಗಳ ಪರಿಶೀಲನೆ ನಡೆಸುವ ಮೂಲಕ ಎಲ್ಲಾ ಹಳೆಯ ದಾಖಲೆಗಳು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ. ಆಧುನಿಕ ಯಂತ್ರಗಳು ಬಳಸಿಕೊಂಡು ದಾಖಲೆಗಳ ಸಂರಕ್ಷಣೆಗೆ
ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಾಡಕಚೇರಿಯ ಸೇವೆಗಳ ಕುರಿತು ಮಾಹಿತಿ ಪಡೆದ ಸಚಿವರು, ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಯಾವ ಕಾರಣಕ್ಕೆ ಎಕ್ಟೋಲೆಜೆಂಟ್ ಪ್ರಿಂಟ್ ನೀಡಬೇಕು. ಅರ್ಜಿ ಸಲ್ಲಿಸಿದ ನಂತರ ಅವರಿಗೆ ಆನ್‍ಲೈನ್ ಮೂಲಕ ಎಸ್‍ಎಂಎಸ್, ವಾಟ್ಸ್ ಆಪ್ ಮೂಲಕ ಸಂದೇಶ ರವಾನೆ ಆಗಬೇಕು. ಅಲ್ಲದೆ, ವಿವಿಧ ಯೋಜನೆಗಳ ಪ್ರಮಾಣ ಪತ್ರಗಳು ಕೂಡ ಅವರು ನೇರವಾಗಿ ವಾಟ್ಸ್ ಆಪ್ ಮೂಲಕ ಪಡೆಯುವಂತೆ ಆಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ,ಕಂದಾಯ ಇಲಾಖೆಯ ಪ್ರಧಾನ
ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತ ಪೆÇಮ್ಮಲ ಸುನೀಲ್ ಕುಮಾರ್,
ಎಸ್‍ಎಸ್‍ಎಲ್‍ಆರ್ ಹೆಚ್ಚುವರಿ ಆಯುಕ್ತ ಕೆ. ಜಯಪ್ರಕಾಶ್, ಕಲಬುರಗಿ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ
ಬಾಜಪೇಯಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದ್ರಿ, ತಹಶೀಲ್ದಾರ ಅಂಜು ತಬಸುಮ್, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್ ಪಂಚಾಳ್, ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.